More

  ದರ್ಶನ್ ಅಭಿಮಾನಿಗಳಿಗೆ ಅಣ್ಣ ಆದ್ರೂ ಪವಿತ್ರಾಗೌಡ ಅತ್ತಿಗೆ ಅಲ್ಲ; ದಾಖಲೆಯಲ್ಲಿ ರಿವೀಲಾಯ್ತು ಡಿ ಬಾಸ್​​​ ಲೈಫ್​​ ಸೀಕ್ರೆಟ್​

  ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ.

  ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧ ಕುರಿತಾಗಿ ಹಲವು ವರ್ಷಗಳಿಂದ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಆಗುತ್ತಲೆ ಇದೆ.​ ಕೆಲವು ತಿಂಗಳುಗಳ ಹಿಂದೆ ದರ್ಶನ್​ ಅವರ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ತಮ್ಮ ಫ್ಯಾಮಿಲಿ ಪೋಟೋವನ್ನು ಪೋಸ್ಟ್ ಮಾಡಿ ತಮ್ಮ ಕುಟುಂಬ ಜೀವನದ ಬಗ್ಗೆ ತಿಳಿಸಿದರು. ಈ ನಡುವೆ ಪವಿತ್ರಾ ಗೌಡ ಅವರು ದರ್ಶನ್ ಜೊತೆಗೆ ಕಳೆದ ಕೆಲವು ಕ್ಷಣಗಳ ಕೊಲಾಜ್ ವಿಡಿಯೋವನ್ನು ಹಂಚಿಕೊಂಡು ನಮ್ಮ ಸಂಬಂಧಕ್ಕೆ 10 ವರ್ಷ ಎಂದು ಘೋಷಿಸಿದ್ದರು. ಇದಕ್ಕೆ ಕೋಪಗೊಂಡ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ, ಅವರ ಪತಿ ಸಂಜಯ್ ಸಿಂಗ್ ಮತ್ತು ಮಗಳೊಂದಿಗೆ ಇರುವ ಪೋಟೊವನ್ನು ಪೋಸ್ಟ್ ಮಾಡಿದ್ದರು. ಇಬ್ಬರ ಕಿತ್ತಾಟ ಸೋಶಿಯಲ್​ ಮೀಡಿಯಾದಲ್ಲಿ ನಡೆಯುತ್ತಲೆ ಇತ್ತು.

  ದರ್ಶನ್ ಅಭಿಮಾನಿಗಳಿಗೆ ಅಣ್ಣ ಆದ್ರೂ ಪವಿತ್ರಾಗೌಡ ಅತ್ತಿಗೆ ಅಲ್ಲ; ದಾಖಲೆಯಲ್ಲಿ ರಿವೀಲಾಯ್ತು ಡಿ ಬಾಸ್​​​ ಲೈಫ್​​ ಸೀಕ್ರೆಟ್​

  ಫ್ಯಾನ್ಸ್ ಮಾತ್ರ​​ ಪವಿತ್ರಾ ಗೌಡ ನಮ್ಮ​ ಚಿಕ್ಕ ಅತ್ತಿಗೆ ಅಂತ ಮೆರೆಸಿದ್ದರು. ಆದರೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಪವಿತ್ರಾ ದರ್ಶನ್​ ಪತ್ನಿ ಹೌದೋ ಅಲ್ವೋ ಅನ್ನೋದು ರಿವೀಲ್​ ಆಗಿದೆ.

  Darshan Viji

  ತಾಳಿ ಕಟ್ಟಿ ಮದ್ವೆಯಾಗಿದ್ದು ವಿಜಯಲಕ್ಷ್ಮಿನೇ ಆದ್ರೂ ದರ್ಶನ್​ ಮನಸ್ಸು ಮಾತ್ರ ಪವಿತ್ರಾಗೌಡ ಮೇಲೆಯೇ. ಪವಿತ್ರಾಗೆ ಕಾಮೆಂಟ್​ ಮಾಡ್ದ ಅನ್ನೋ ಒಂದೇ ಕಾರಣಕ್ಕೆ ಕೊಲೆ ಮಾಡಿದ ಆರೋಪ ಹೊತ್ತು ದರ್ಶನ್​ ಪೊಲೀಸ್​ ಕಸ್ಟಡಿ ಸೇರಿದ್ದಾನೆ. ಫ್ಯಾನ್ಸ್​ ಕೂಡ ದರ್ಶನ್ ನಮ್ಮಣ್ಣ. ವಿಜಯಲಕ್ಷ್ಮಿ ದೊಡ್ಡತ್ತಿಗೆ. ಪವಿತ್ರಾ ಚಿಕ್ಕತ್ತಿಗೆ ಅಂತ ಮೆರೆಸಿದ್ರು. ಆದ್ರೆ ಪೊಲೀಸರ ದಾಖಲೆಯಲ್ಲಿ ಎಲ್ಲೂ ಪವಿತ್ರಾ ಗೌಡಳನ್ನ ದರ್ಶನ್‌ ಪತ್ನಿ ಎಂದು ಉಲ್ಲೇಖಿಸಿಲ್ಲ.

  See also  ಸಾಲ ಮರಳಿಸದವಳ ಬಳಿ ಸೆಕ್ಸ್ ಕೇಳಿದ ವೃದ್ಧ! ಒಂದೇ ವರ್ಷದಲ್ಲಿ ಸೂಟ್​ಕೇಸ್​ನಲ್ಲಿ ಹೆಣವಾಗಿ ಸಿಕ್ಕ!

  Darshan

  ರೇಣುಕಾಸ್ವಾಮಿ ಕೊಲೆಗೆ ಪವಿತ್ರಾ ಅಂದು ಹಾಕಿದ್ದ ದರ್ಶನ್​ ಜೊತೆಗಿನ 10 ವರ್ಷದ ರಿಲೇಶನ್​ಶಿಪ್​ ರೀಲ್ಸ್​ ಕಾರಣ ಅನ್ನೋ ಮಾತಿದೆ. ದರ್ಶನ್​ ವಿಜಯಲಕ್ಷ್ಮಿ ಮಧ್ಯೆ ನೀನ್​ ಹೋಗಬೇಡ ಅಂತ ರೇಣುಕಾಸ್ವಾಮಿ ಕಮೆಂಟ್​ ಹಾಕಿದ್ದ ಅಂತಲೂ ಹೇಳಲಾಗಿತ್ತು. ಹೀಗೆ ನಾನೇ ದರ್ಶನ್​ ಹೆಂಡತಿ ಅಂತ ಮೆರೆದಿದ್ದೇ ಇಂದು ಆಕೆಗೆ ಕುಣಿಕೆ ಆಯ್ತಾ ಅನ್ನೋ ಪ್ರಶ್ನೆ ಕೂಡ ಇದೆ. ಆದ್ರೆ ಇಷ್ಟೆಲ್ಲಾ ಮೆರೆದಾಡಿದ್ರೂ ಕೂಡ, ಪೊಲೀಸರ ದಾಖಲೆಯಲ್ಲಿ ಎಲ್ಲೂ ಪವಿತ್ರಾ ಗೌಡಳನ್ನ ದರ್ಶನ್‌ ಪತ್ನಿ ಎಂದು ಉಲ್ಲೇಖಿಸಿಲ್ಲ. ಕೇವಲ ಪವಿತ್ರಾ ಗೌಡ ಬಿನ್ ಪುಟ್ಟಣ್ಣ ಅಂತ ಮಾತ್ರ ಉಲ್ಲೇಖಿಸಿರೋದು ನ್ಯೂಸ್​ಫಸ್ಟ್​ಗೆ ಲಭ್ಯವಾಗಿರೋ 274 ಪುಟಗಳ ದಾಖಲೆಯಲ್ಲಿದೆ.

  darshan

  ಏನಿದು ಪ್ರಕರಣ?: ಫೆಬ್ರವರಿ 27ರಿಂದ ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ.

  ದರ್ಶನ್ ಅಭಿಮಾನಿಗಳಿಗೆ ಅಣ್ಣ ಆದ್ರೂ ಪವಿತ್ರಾಗೌಡ ಅತ್ತಿಗೆ ಅಲ್ಲ; ದಾಖಲೆಯಲ್ಲಿ ರಿವೀಲಾಯ್ತು ಡಿ ಬಾಸ್​​​ ಲೈಫ್​​ ಸೀಕ್ರೆಟ್​

  ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

  See also  ತನಿಖೆಗೆ ಸಹಕರಿಸುತ್ತಿಲ್ಲವೆಂದು ದರ್ಶನ್ ಸೇರಿ ನಾಲ್ವರನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ

  darshan 3

  ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ.

  ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts