

ನವದೆಹಲಿ: ನೀವು ಮನೆಯಲ್ಲೇ ಕುಳಿತು 7 ಲಕ್ಷ ರೂ. ಸಂಪಾದಿಸಬೇಕೆ? ಹಾಗಾದರೆ, ನಿಮಗಿದು ಸುವರ್ಣಾವಕಾಶವೇ ಸರಿ. ನಿಮ್ಮ ಬಳಿ ಕೇವಲ 1 ರೂಪಾಯಿ ( One Rupee ) ನೋಟಿದ್ದರೆ ಇದು ಸಾಧ್ಯವಾಗಲಿದೆ. ನಿಮಗಿದು ಅಚ್ಚರಿ ಎನಿಸಿದರೂ ಖಂಡಿತವಾಗಿಯು ಇದು ನಿಜ. ನಿಮ್ಮ ಬಳಿ ವಿಶೇಷವಾದ 1 ರೂಪಾಯಿ ನೋಟಿದ್ದರೆ ಈ ರೀತಿ ಮಾಡಿ.
ಒಂದು ರೂಪಾಯಿ ನೋಟಿಗೆ ಇಷ್ಟೊಂದು ಬೆಲೆ ಬಂದಿದ್ದು ಹೇಗೆ ಎಂದು ಆಶ್ಚರ್ಯವಾಗಬಹುದು. ಒಂದು ರೂಪಾಯಿ, ಎರಡು ರೂಪಾಯಿ ಮತ್ತು ಐದು ರೂಪಾಯಿ ನೋಟುಗಳ ಐತಿಹಾಸಿಕ ಮಹತ್ವವನ್ನು ಪರಿಗಣಿಸಿ ಮೌಲ್ಯವನ್ನು ಹೆಚ್ಚಿಸಲಾಗಿದೆ. ಕೆಲ ಹಳೆಯ ವಸ್ತುಳಿಗೆ ಈ ಆಧುನಿಕ ಜಗತ್ತಿನಲ್ಲಿ ತುಂಬಾ ಬೇಡಿಕೆ ಇದೆ. ಅದರಲ್ಲೂ ಹಳೆಯ ನೋಟುಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ. ನಮ್ಮಲ್ಲಿರುವ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲೆಂದೇ ಕೆಲವು ವೆಬ್ಸೈಟ್ಗಳಿವೆ. ಅವುಗಳಲ್ಲಿ ಹಳೆಯ ನಾಣ್ಯ ಮತ್ತು ನೋಟನ್ನು ಮಾರಿ ಹಣ ಪಡೆಯಬಹುದು. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ, ಕೆಲವು ಜನರು ಮಾತ್ರ ಹಳೆಯ ನೋಟುಗಳನ್ನು ನೋಡುತ್ತಾರೆ. ಏಕೆಂದರೆ, ಭಾರತ ಸರ್ಕಾರವು 29 ವರ್ಷಗಳ ಹಿಂದೆಯೇ ಈ ನೋಟುಗಳ ಮುದ್ರಣವನ್ನು ನಿಲ್ಲಿಸಿತು. ಇದಾದ ನಂತರ 2015ರಲ್ಲಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಹಳೆಯ ನೋಟುಗಳನ್ನು ಮರು ಪರಿಚಯಿಸಲಾಯಿತು.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದ ಒಂದು ರೂಪಾಯಿ ನೋಟು ಈಗ ಅತ್ಯಮೂಲ್ಯವಾಗಿದೆ. 1935ರಲ್ಲಿ ಜಾರಿಗೆ ತಂದ ನೋಟಿಗೆ ಅಂದಿನ ರಾಜ್ಯಪಾಲ ಜೆ. ಕೆಲ್ಲಿ ಸಹಿ ಹಾಕಿದ್ದರು. ಸುಮಾರು 80 ವರ್ಷಗಳ ಹಿಂದೆ ಈ ನೋಟಗಳನ್ನು ಮುದ್ರಿಸಲಾಗಿತ್ತು. ಈ ನೋಟುಗಳು ತನ್ನ ಅಪರೂಪದ ಹಾಗೂ ಐತಿಹಾಸಿಕ ವೈಶಿಷ್ಟ್ಯಗಳಿಂದಾಗಿ ಇಂದು 7 ಲಕ್ಷ ರೂ. ಮೌಲ್ಯವನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, 25 ಪೈಸೆಯ ನಾಣ್ಯಗಳನ್ನು ಹೊಂದಿರುವವರು ಸಹ ಹಣವನ್ನು ಗೆಲ್ಲಬಹುದು. ಇವುಗಳು ಆನ್ಲೈನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿ 1.50 ಲಕ್ಷ ರೂ.ವರೆಗೂ ಪಡೆಯಬಹುದು.
ನೀವೇನಾದರೂ ತುಂಬಾ ಅದೃಷ್ಟವಂತರಾಗಿದ್ದರೆ, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷಾಧಿಪತಿ ಆಗಬಹುದು. ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ ನಿಮಗೂ ಲಕ್ಷಾಧಿಪತಿ ಆಗುವ ಅವಕಾಶವಿದೆ. ನೀವು ಎಲ್ಲಿಯೂ ಪ್ರಯಾಣಿಸದೆ ಕುಳಿತಲ್ಲೇ ಹಳೆಯ ನೋಟನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಅಂದರೆ, ಆನ್ಲೈನ್ನಲ್ಲಿ ನೋಟುಗಳನ್ನು ಮಾರಾಟ ಮಾಡಬಹುದು. ಇಂಡಿಯಾ ಮಾರ್ಟ್, ಕಾಯಿನ್ ಬಜಾರ್, ಕ್ವಿಕರ್, Pinterest, OLX ಇತ್ಯಾದಿ ವೆಬ್ಸೈಟ್ಗಳಲ್ಲಿ ಹಳೆಯ ನೋಟುಗಳನ್ನು ಮಾರಾಟ ಮಾಡಬಹುದು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಳೆಯ ಕರೆನ್ಸಿ ನೋಟುಗಳ ಮಾರಾಟ ಅಥವಾ ಖರೀದಿಯನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ಸಹ ಗಮನಿಸಬೇಕು.
ಇನ್ನು ಈ ಮೇಲಿನ ವೆಬ್ಸೈಟ್ಗಳನ್ನು ತೆರೆದು, ನೀವು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ನೋಟಿನ ಎರಡೂ ಬದಿಯ ಫೋಟೋ ತೆಗೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿದರೆ, ಹೇಳಿದ ಕರೆನ್ಸಿ ನೋಟು ಅಗತ್ಯವಿರುವವರು ನಿಮ್ಮನ್ನು ಸಂಪರ್ಕಿಸಿ, ಹಣ ಕೊಟ್ಟು ಖರೀದಿ ಮಾಡುತ್ತಾರೆ. (ಏಜೆನ್ಸೀಸ್)