ಆ ಒಂದು ಪಾತ್ರಕ್ಕಾಗಿ ಖ್ಯಾತ ನಿರ್ದೇಶಕ ಶಂಕರ್​ಗೆ ಅರೆಬೆತ್ತಲೆ ಫೋಟೋ ಕಳುಹಿಸಿದ್ದರಂತೆ ಈ ಸ್ಟಾರ್​ ನಟಿ! S Shankar

Shankar

ಹೈದರಾಬಾದ್​: ನಟಿ ಕಸ್ತೂರಿ ಶಂಕರ್ ( Kasthuri Shankar ) ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.

ಆ ಒಂದು ಪಾತ್ರಕ್ಕಾಗಿ ಖ್ಯಾತ ನಿರ್ದೇಶಕ ಶಂಕರ್​ಗೆ ಅರೆಬೆತ್ತಲೆ ಫೋಟೋ ಕಳುಹಿಸಿದ್ದರಂತೆ ಈ ಸ್ಟಾರ್​ ನಟಿ! S Shankar

ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 49 ಆದರೂ ಗ್ಲಾಮರ್​ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ.

ಕಸ್ತೂರಿ ಅವರು ಚೆನ್ನೈನ ಎತಿರಾಜ್ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದ ನಂತರ 1992 ರಲ್ಲಿ ಮಿಸ್ ಚೆನ್ನೈ ಪ್ರಶಸ್ತಿಯನ್ನು ಗೆದ್ದರು. ಅವರು ಅದೇ ವರ್ಷ ಫೆಮಿನಾ ಮಿಸ್ ಮದ್ರಾಸ್ ಸೌಂದರ್ಯ ಸ್ಪರ್ಧೆಯನ್ನು ಸಹ ಗೆದ್ದರು. ಇದೇ ಗೆಲುವು ಅವರನ್ನು ಮಾಡೆಲಿಂಗ್ ಮತ್ತು ನಟನೆಯತ್ತ ಮುಖ ಮಾಡುವಂತೆ ಮಾಡಿತು. ‘ಆತಾ ಉನ್ ಕೊಯಿಲಿಲೆ’ ಎಂಬ ಸಿನಿಮಾದೊಂದಿಗೆ ಕಸ್ತೂರಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇಂಡಿಯನ್ ಚಿತ್ರದಲ್ಲಿ ಕಮಲ್ ಹಾಸನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ ನಂತರ ಕಸ್ತೂರಿ ಅವರು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದರು.

Kasthuri Shankar

ತೆಲುಗಿನಲ್ಲಿ ನಾಗಾರ್ಜುನ ಅಭಿನಯದ ಅನ್ನಮಯ್ಯ ಚಿತ್ರದಲ್ಲಿ ನಟಿಸಿದ ನಂತರ ಕಸ್ತೂರಿ ಪ್ರಸಿದ್ಧರಾದರು. 2019ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ತಮಿಳು ಸೀಸನ್ 3ಗೆ ಪ್ರವೇಶಿಸಿದರು. ಕಸ್ತೂರಿ ಈಗ ಸ್ಟಾರ್ ಮಾ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಯಶಸ್ವಿ ತೆಲುಗು ಧಾರಾವಾಹಿ ‘ಇಂಟಿಂತಿ ಗೃಹಲಕ್ಷ್ಮಿ’ಯಲ್ಲಿ ತುಳಸಿಯ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ವದಂತಿಗಳ ನಡುವೆಯೇ ಮತ್ತಷ್ಟು ಸಿನಿಮಾಗಳನ್ನು ಒಪ್ಪಿಕೊಂಡ ಐಶ್ವರ್ಯ ರೈ! ಈ ಭಾಷೆಯ ಚಿತ್ರಗಳಿಗೆ ಮೊದಲ ಆದ್ಯತೆ

ಅಂದಹಾಗೆ ಇಂಡಿಯನ್​ ಸಿನಿಮಾದಲ್ಲಿ ಕಸ್ತೂರಿ ಅವರು ಸೇನಾಪತಿ ಚಂದ್ರುವಿನ ಮಗಳ ಪಾತ್ರದಲ್ಲಿ ನಟಿಸಿದರು. ಬೆಂಕಿ ಅಪಘಾತದಲ್ಲಿ ಸಾವನ್ನಪ್ಪುವ ಪಾತ್ರ ಅದಾಗಿತ್ತು. ಚಿಕ್ಕದಾದರೂ ಪ್ರಭಾವಶಾಲಿ ಪಾತ್ರಕ್ಕಾಗಿ ಕಸ್ತೂರಿ ಅವರು ಬಹಳ ಮೆಚ್ಚುಗೆ ಗಳಿಸಿದರು. ಆದರೆ, ಈ ಸಿನಿಮಾದ ಶೂಟಿಂಗ್​ಗೂ ಮುನ್ನ ನಡೆದ ಸ್ವಾರಸ್ಯಕರ ಘಟನೆಯನ್ನು ಈ ಹಿಂದೆ ಮಾಧ್ಯಮ ಸಂದರ್ಶನದಲ್ಲಿ ಕಸ್ತೂರಿ ಹೇಳಿಕೊಂಡಿದ್ದರು. ಅದೇನೆಂದರೆ, ತಮ್ಮ ಬಿಕಿನಿ ಫೋಟೋಗಳನ್ನು ನಿರ್ದೇಶಕರಿಗೆ ಕಳುಹಿಸಿದ್ದರಂತೆ.

ಇಂಡಿಯನ್​​ ಸಿನಿಮಾದಲ್ಲಿ ಕಮಲ್ ಹಾಸನ್ ಎದುರು ನಾಯಕಿಯಾಗಿ ಕೆಲಸ ಮಾಡುವ ಅವಕಾಶವನ್ನು ನಾನು ಹೇಗಾದರೂ ಪಡೆದುಕೊಳ್ಳಲು ಬಯಸಿದ್ದೆ. ನಾನು ನನ್ನ ಬಿಕಿನಿ ಫೋಟೋಶೂಟ್ ಚಿತ್ರಗಳನ್ನು ನಿರ್ದೇಶಕ ಶಂಕರ್​ ಅವರಿಗೆ ಕಳುಹಿಸಿದ್ದೆ. ಆದರೆ, ನಾನು ಆ ಸಮಯದಲ್ಲಿ ಚಿಕ್ಕವಳಾಗಿದ್ದೆ ಮತ್ತು ಅದೇ ಸಮಯದಲ್ಲಿ ರಂಗೀಲಾ ಸಿನಿಮಾ ಬಿಡುಗಡೆಗೆ ಯಶಸ್ವಿಯಾಗಿತ್ತು. ಆ ಸಿನಿಮಾದ ನಾಯಕಿ ಊರ್ಮಿಳಾ ತುಂಬಾ ಫೇಮಸ್​ ಆಗಿದ್ದರು. ಹೀಗಾಗಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು. ನನಗೆ ಸಣ್ಣ ಪಾತ್ರವನ್ನು ನೀಡಿದರು ಎಂದು ಕಸ್ತೂರಿ ಹೇಳಿಕೊಂಡಿದ್ದರು.

Kasthuri Shankar

ನವೆಂಬರ್ 3 ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೆ ನೀಡಿ ಕಸ್ತೂರಿ ಅವರು ವಿವಾದಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ಅವರ ಹಳೆಯ ವಿಚಾರಗಳು ಜಾಲತಾಣದಲ್ಲಿ ಮತ್ತೆ ವೈರಲ್​ ಆಗಿವೆ.

ಪ್ರಸ್ತುತ ಕಸ್ತೂರಿ ಶಂಕರ್​ ಅವರು ಪ್ರಸ್ತುತ ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

ನಟಿ ಕಸ್ತೂರಿ ವಿರುದ್ಧ ಸಿಡಿದೆದ್ದ ಸರ್ಕಾರಿ ನೌಕರರು! ಸೌತ್​ ಬ್ಯೂಟಿಗೆ ಶುರುವಾಯ್ತು ಬಂಧನ ಭೀತಿ | Kasthuri Shankar

Share This Article

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…

Lemon water: ಊಟವಾದ ನಂತರ ಒಂದು ಚಮಚ ನಿಂಬೆ ರಸವನ್ನು ಕುಡಿಯಿರಿ.. 

Lemon water: ನಿಂಬೆಹಣ್ಣುಗಳಲ್ಲಿ ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಪೋಷಕಾಂಶಗಳು ಸಮೃದ್ಧವಾಗಿವೆ. ಇದು…