ಮುಂಬೈ: ಕಳೆದ ಒಂದು ತಿಂಗಳಿಂದ ಬಾಲಿವುಡ್ ನಟಿ ಐಶ್ವರ್ಯ ರೈ (Aishwarya Rai), ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರಿಂದ ದೂರ ಉಳಿದಿದ್ದಾರೆ. ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎಂಬ ಹಲವಾರು ವದಂತಿಗಳು ಸಾಮಾಜಿಕ ಜಾಲತಾಣವನ್ನು ಸುತ್ತುವರೆದಿವೆ. ಮಾಧ್ಯಮ ಮತ್ತು ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಸುದ್ದಿಗಳು ಸದ್ದು ಮಾಡುತ್ತಿದ್ದರೂ ಸಹ ಇದ್ಯಾವುದಕ್ಕೂ ನಟಿ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಪುತ್ರಿ ಆರಾಧ್ಯ ಜತೆ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಐಶ್ವರ್ಯ, ಅಭಿಷೇಕ್ ಅವರೊಂದಿಗೆ ಯಾವ ವೇದಿಕೆಯಲ್ಲಿಯೂ ಕಾಣದೆ ಇರುವುದು ಇದೀಗ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ನವೆಂಬರ್ 15ರಿಂದ ಕಬ್ಬು ಅರೆಯುವ ಕಾರ್ಯ ಆರಂಭಿಸಲಿವೆ; ಮುರಗೇಶ ನಿರಾಣಿ ಹೇಳಿಕೆ
ಕುಟುಂಬದವರಿಂದ ದೂರ
ಸದ್ಯ ವಿಚ್ಛೇದನ ವದಂತಿಗಳು ನಟಿಯನ್ನು ಆವರಿಸಿಕೊಂಡಿದ್ದೇ ಆದರೂ ತಾನು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಐಶ್ವರ್ಯ ಅವರ ನಡೆ, ಇದೀಗ ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಪ್ರಸ್ತುತ ಪತಿ ಅಭಿಷೇಕ್ ಅವರಿಗೆ ವಿಚ್ಛೇದನ ನೀಡುವ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡದ ನಟಿ, ಗಂಡ ಮತ್ತು ಅವರ ಕುಟುಂಬದವರಿಂದ ದೂರ ಉಳಿದಿದ್ದಾರೆ. ವಿಚ್ಛೇದನಕ್ಕೆ ಸಂಬಂಧಿಸಿದ ವದಂತಿಗಳಿಗೆ ಅಭಿಷೇಕ್ ಬಚ್ಚನ್ ಕೂಡ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ವ್ಯಾಪಕ ವದಂತಿಗಳನ್ನು ಎದುರಿಸುತ್ತಿರುವ ಐಶ್ವರ್ಯ ರೈ, ಇದೀಗ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಭಾಷೆಯ ಚಿತ್ರಗಳಿಗೆ ಮೊದಲ ಆದ್ಯತೆ
ಈಗಾಗಲೇ ಹೊಸ ಆಫರ್‌ಗಳಿಗಾಗಿ ಚಿತ್ರರಂಗದ ತನ್ನ ಸ್ನೇಹಿತರೊಂದಿಗೆ ಸಮಾಲೋಚನೆಯನ್ನು ನಡೆಸಿರುವ ನಟಿ, ತಮ್ಮ ನಟನೆಯನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ. ಪಾತ್ರಗಳ ಆಯ್ಕೆ ಬಗ್ಗೆ ಹೆಚ್ಚು ಗಮನಹರಿಸಿರುವ ಐಶ್ವರ್ಯ, ತಮ್ಮ ವಯಸ್ಸು ಮತ್ತು ಇಮೇಜ್‌ಗೆ ಸರಿಹೊಂದುವ ಪಾತ್ರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಮಣಿರತ್ನಂ ಅವರ ಬ್ಲಾಕ್‌ಬಸ್ಟರ್ ಚಲನಚಿತ್ರಗಳಾದ ‘ಪೊನ್ನಿಯನ್ ಸೆಲ್ವನ್ ಭಾಗ 1’ ಮತ್ತು ‘ಭಾಗ 2’ರಲ್ಲಿ ಕಾಣಿಸಿಕೊಂಡ ನಟಿ, ಈ ಸಿನಿಮಾದಲ್ಲಿ ದ್ವಿಪಾತ್ರಗಳನ್ನು ನಿರ್ವಹಿಸಿದ್ದಾರೆ. ಸದ್ಯ ಹಿಂದಿ ಚಿತ್ರಗಳಿಗೆ ಸಹಿ ಹಾಕಲು ಅವರು ಮೊದಲ ಆದ್ಯತೆ ನೀಡಿದ್ದಾರೆ ಎಂದು ತಿಳಿದುಬಂದಿದೆ,(ಏಜೆನ್ಸೀಸ್).