ಪುರುಷರೇ, ನಿಮಗೆ ಹದಿಹರೆಯದ ಮಗಳಿದ್ದಾಳೆಯೇ? ಅವಳಿಗೆ ಈ 5 ವಿಷಯಗಳನ್ನು ತಪ್ಪದೇ ತಿಳಿಸಿಕೊಡಿ...Fathers

untitled-design-2025-10-02t174812702-68de6d8fb7129
Published on

Fathers: 16 ವರ್ಷ ಹಿಂದೆ ಈ ಭೂಮಿಗೆ ಕಾಲಿಟ್ಟ ಮಗಳು, ಈಗ ತಾನೇ ಅಂಗೈನಿಂದ ಕೆಳಗಿಳಿದಂತೆ ಅನಿಸುತ್ತಿದೆ. ಎದೆ ಎತ್ತರಕ್ಕೆ ಬೆಳೆದಿರುವ ಅವಳಿಗೆ ಇನ್ನು ಮುಂದೆ ಹೊಸ ತಿರುವುಗಳು ಬರಲಾರಂಭಿಸುತ್ತವೆ. ಹೆಣ್ಣು ಮಕ್ಕಳೆಂದರೆ ಸೆರಗಿಗೆ ಬೆಂಕಿ ಕಟ್ಟಿಕೊಂಡಾಗೆ ಇನ್ನೆರಡು ವರ್ಷ ಕಾದು 18 ವರ್ಷ ಆಗೋ ಅಷ್ಟರಲ್ಲಿ ಮದುವೆ ಮಾಡಿ ಕಳುಹಿಸಿದರೆ ನಮ್ಮ ಜವಬ್ದಾರಿ ಮುಗಿತು. ಅಂತ ಕಟ್ಟೆ ಮೇಲೆ ಕೂತ ಶಾರದಮ್ಮ ಹೇಳಿರೋ ಮಾತಿದು.

ವಿಶೇಷವಾಗಿ ಹೆಣ್ಣು ಮಕ್ಕಳು 15 -18 ವರ್ಷಗಳ ವಯಸ್ಸಿನ ನಡುವೆ ಪ್ರೌಢಾವಸ್ಥೆಗೆ ತೆರಳುತ್ತಾರೆ. ಈ ಅವಧಿಯಲ್ಲಿ ಆಕೆಯ ಮನಸ್ಸು ಹಲವಾರು ಪ್ರಶ್ನೆಗಳಿಂದ ತುಂಬಿರುತ್ತದೆ. ಅವಳು ಸಮಾಜಕ್ಕೆ ಹೊಂದಿಕೊಳ್ಳಬೇಕೋ ಅಥವಾ ತನ್ನನ್ನು ತಾನು ತಿದ್ದಿಕೊಳ್ಳಬೇಕೋ ಎಂಬ ಗೊಂದಲದಲ್ಲಿ ಸಿಲುಕಿಕೊಂಡುತ್ತಾಳೆ. ಈ ಸಮಯದಲ್ಲಿ ಆಕೆಯ ಪೋಷಕರು ಮಹತ್ವದ ಪಾತ್ರ ವಹಿಸಬೇಕಾಗಿರುತ್ತದೆ.

ಪ್ರತಿಯೊಬ್ಬ ಹೆಣ್ಣುಮಗಳು ತಾಯಿಯೊಂದಿಗೆ ಹೆಚ್ಚು ಮಾತನಾಡಿದರೂ ಅವಳ ತಂದೆಯ ಬೆಂಬಲ ಆಕೆಗೆ ಆತ್ಮವಿಶ್ವಾಸ, ಆಲೋಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ತಂದೆಯಾದವರು ಮಗಳ ಪ್ರೌಢಾವಸ್ಥೆಯಲ್ಲಿ ತಂದೆ ಹೇಳುವ ಈ 5 ಮಾತುಗಳು ಆಕೆಯ ಜೀವನದುದ್ದಕ್ಕೂ ತಾಳ್ಮೆ ಮತ್ತು ಶಕ್ತಿಯನ್ನು ನೀಡಲು ಪ್ರೇರೇಪಿಸುತ್ತವೆ.

1. ಮಗಳ ಜೀವನದಲ್ಲಿ ನಿಮ್ಮ ಸ್ಥಾನವನ್ನು ತಿಳಿಸಿರಿ

ತಂದೆಯಾದವರು ತಮ್ಮ ಮೌಲ್ಯಗಳು ಇತರರ ಅಭಿಪ್ರಾಯಗಳ ಮೇಲೆ ಅವಲಂಬಿತವಾಗಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹಾಗೇ ಸಮಾಜ ಏನು ಹೇಳುತ್ತದೆ. ಜನರು ಏನನ್ನು ಯೋಚಿಸುತ್ತಾರೆ ಎಂಬುದನ್ನು ತಿಳಿಸಬೇಕು. ಹಾಗೆಯೇ ಆಕೆಗೆ ತಂದೆಯ ಪರಿಶ್ರಮದ ಬಗ್ಗೆ ತಿಳಿಸಬೇಕು. ಮಗಳ ಏಳಿಗೆಗಾಗಿ ದುಡಿಯುವ ತಂದೆ ಆದಷ್ಟು ಮೌಲ್ಯಯುತವಾದ ಗುಣಗಳ ಬಗ್ಗೆ ಮಗಳೊಂದಿಗೆ ಪರಸ್ಪರ ಹಂಚಿಕೊಳ್ಳಬೇಕು. ಆಗ ತಂದೆಯ ಪಾತ್ರಕ್ಕೆ ಒಂದು ನಿಜವಾದ ಬೆಲೆ ಸಿಗುತ್ತದೆ.

2. ಧೈರ್ಯ ಹೇಳಬೇಕು

ಹೆಣ್ಣುಮಕ್ಕಳು ಸಾಮಾನ್ಯವಾಗಿ ಇಲ್ಲ ಎಂದು ಹೇಳಲು ಕಷ್ಟ ಪಡುತ್ತಾರೆ. ಇನ್ನೊಬ್ಬ ವ್ಯಕ್ತಿಯನ್ನು ನೋಯಿಸಬಾರದು ಎಂದು ಭಾವಿಸುತ್ತಾರೆ. ಆದರೆ, ಇಲ್ಲ ಎಂದು ಹೇಳುವುದು ಸಹ ಒಂದು ಧೈರ್ಯದ ಸ್ವರೂಪ. ತಂದೆಯಾದವರು ಮಗಳ ಜೀವದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬೇಕು. ಹಾಗೆಯೇ ಯಾವುದೇ ಸಂಬಂಧದಲ್ಲಿ ಆಕೆಯ ಗಡಿಗಳನ್ನು ದಾಟದೆ ಇರುವ ಹಾಗೆ ನೋಡಿಕೊಳ್ಳಬೇಕು. ಹಾಗಾಗಿ ತಂದೆ ಯಾವಾಗಲು ಮಗಳೊಂದಿಗೆ ನಾನಿದ್ದೇನೆ ಎಂಬ ಧೈರ್ಯ ತುಂಬಿದಾಗ ಮಗಳು ತಂದೆಯ ಮಾತನ್ನು ಗೌರವಿಸುವುದನ್ನು ಕಲಿಯುತ್ತಾಳೆ.

3. ಏನಾದರೂ ತಪ್ಪಾಗಿದೆ ಎಂದು ಭಾವಿಸಿದ್ದಲ್ಲಿ ಮಗಳೊಂದಿಗೆ ಪ್ರೀತಿಯಿಂದ ಮಾತನಾಡಿ

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಕೆಲವೊಂದು ಸಂದರ್ಭದಲ್ಲಿ ಮೌನವಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ತಂದೆಯಾದವರು ತಮ್ಮ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುದರ ಜೊತೆಗೆ ಸಮಸ್ಯೆ ಏನಾಗಿದೆ ಎಂಬುದನ್ನು ತಿಳಿಯಬೇಕು. ಮಗಳಿಂದ ಏನಾದರೂ ಸಮಸ್ಯೆ ಆಗಿದ್ದರೆ, ಅದನ್ನು ಪರಿಹರಿಸುವುದರ ಬಗ್ಗೆ ತಿಳಿಸಬೇಕು. ಇಲ್ಲವೇ ಮಗಳೇ ತೊಂದರೆಯಲ್ಲಿ ಸಿಲುಕಿಕೊಂಡಾಗ ಆಕೆಗೆ ಧೈರ್ಯ ತುಂಬಿ ಅದರಿಂದ ಹೊರ ಬರುವಂತೆ ಮಾಡಬೇಕು. ಹೀಗೆ ಮಾಡಿದಾಗ ಮಗಳು ಮತ್ತೊಂದು ವ್ಯಕ್ತಿಯ ಮೇಲೆ ಎಂದಿಗೂ ಅವಲಂಬನೆಯಾಗುವುದಿಲ್ಲ.

4. ಶಿಕ್ಷಣವೇ ನಿಜವಾದ ಶಕ್ತಿ

ಒಬ್ಬ ತಂದೆ ಯಾವಾಗಲೂ ತನ್ನ ಮಗಳಿಗೆ ಅವಳ ನಿಜವಾದ ಶಕ್ತಿ ಅವಳ ಶಿಕ್ಷಣದಲ್ಲಿದೆ ಎಂದು ತಿಳಿಸಬೇಕು. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಜ್ಞಾನ ಮತ್ತು ಕೌಶಲ್ಯಗಳು ಕೈಯಲ್ಲಿರುವಾಗ, ಅವಳು ಯಾವುದೇ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವಾಗಿದೆ ಎಂದು ತಿಳಿಸಿಕೊಡಿ. ಇದಲ್ಲದೇ ಹೆಣ್ಣು ಮಕ್ಕಳಿಗೆ ಭರವಸೆ ನೀಡುವುದು ಹಾಗೂ ಜವಬ್ದಾರಿ ನಿರ್ವಹಿಸುವುದು ತಂದೆಯಾದವರ ಜವಬ್ದಾರಿಯಾಗಿರುತ್ತದೆ. ಏಕೆಂದರೆ ನಂಬಿಕೆಯು ಹುಡುಗಿಗೆ ಅತ್ಯಂತ ಅಮೂಲ್ಯವಾದ ಆಸ್ತಿಯಾಗಿದ್ದು, ಅದು ಅವಳ ಜೀವನವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

5. ಎಲ್ಲರನ್ನೂ ಮೆಚ್ಚಿಸುವ ಅಗತ್ಯವಿಲ್ಲ

ಜಗತ್ತಿನಲ್ಲಿ ಎಲ್ಲರ ಮನೋಭಾವಗಳು ಬೇರೆ ಬೇರೆ ರೀತಿಯಲ್ಲಿರುವುದರಿಂದ ಯಾರನ್ನು ಮೆಚ್ಚಿಸುವ ಅಗತ್ಯವಿಲ್ಲ ಎಂದು ತಂದೆ ಮಗಳಿಗೆ ಹೇಳಿಕೊಡಬೇಕು. ಆಗ ಹೆಣ್ಣು ಮಕ್ಕಳು ಯಾರನ್ನು ಮೆಚ್ಚಿಸದೆ ತಮ್ಮ ದೃಢ ನಿರ್ಧಾರವನ್ನು ಮತ್ತೊಂದು ವ್ಯಕ್ತಿಗೆ ತಿಳಿಸಲು ಬಯಸುತ್ತಾರೆ. ಇದರಿಂದ ಅವರಲ್ಲಿ ಧೈರ್ಯ ಮತ್ತು ತಾಳ್ಮೆ ಇನ್ನಷ್ಟು ಹೆಚ್ಚಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net