RSS Dussehra Event | ಯುವಕರು ರಾಜಕೀಯದ ಭಾಗವಾಗಬೇಕು ಎಂದ ರಾಮನಾಥ್ ಕೋವಿಂದ್

Ramnath Kovind At RSS Dussehra Event
Published on

RSS Dussehra Event: ಒಳ್ಳೆಯ ವ್ಯಕ್ತಿಗಳು ರಾಜಕೀಯದಿಂದ ದೂರ ಉಳಿಯುತ್ತಿದ್ದಾರೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ (ಅ 2) ವಿಷಾದಿಸಿದ್ದಾರೆ.

ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವಿಜಯದಶಮಿ ರ‍್ಯಾಲಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೋವಿಂದ್​​, ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ಡಾ. ಅಂಬೇಡ್ಕರ್ ಮತ್ತು ಡಾ. ಹೆಡ್ಗೆವಾರ್ ಅವರು ಹಂಚಿಕೊಂಡ ರಾಷ್ಟ್ರೀಯ ಏಕತೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳಿಂದ ನಾನು ಸ್ಫೂರ್ತಿ ಪಡೆದಿದ್ದು, ಆರ್‌ಎಸ್‌ಎಸ್‌ನಲ್ಲಿ ಯಾವುದೇ ಜಾತಿವಾದ ಮತ್ತು ತಾರತಮ್ಯವಿಲ್ಲ, ಸಂಘದ ಸಂಸ್ಥಾಪಕರ ವಿಚಾರಗಳು ಸಮಾಜ ಮತ್ತು ರಾಷ್ಟ್ರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನೆರವಾಗಿವೆ ಎಂದು ಹೇಳಿದರು. ಇತ್ತೀಚೆಗೆ ಒಳ್ಳೆಯ ಜನರು ರಾಜಕೀಯ ರಂಗಕ್ಕೆ ಕಾಲಿಡುತ್ತಿಲ್ಲ, ಯುವಕರು ದೇಶದ ರಾಜಕೀಯ ಭೂದೃಶ್ಯದ ಭಾಗವಾಗಬೇಕೆಂದು ಒತ್ತಾಯಿಸಿದ ಮಾಜಿ ರಾಷ್ಟ್ರಪತಿಗಳು, 'ಟ್ರಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್' ಎಂಬ ಪುಸ್ತಕವನ್ನು ಬರೆಯುತ್ತಿರುವುದಾಗಿ ತಿಳಿಸಿದರು.

ಸ್ವಾವಲಂಬಿ ವಿಧಾನ ಅಳವಡಿಸಿಕೊಳ್ಳಿ..

ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​, ಇಂದು ಸಂಘ 100 ವರ್ಷಗಳ ಪೂರೈಸಿದ್ದು, ಈ ಶತಮಾನೋತ್ಸವವನ್ನು ಆಚರಿಸುತ್ತಿರುವ ನಾವೆ ಧನ್ಯರು. ಪ್ರಪಂಚದೊಂದಿಗೆ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಉಳಿಸಿಕೊಳ್ಳುವಾಗ ಸ್ಥಳೀಯ ಮತ್ತು ಸ್ವಾವಲಂಬಿ ವಿಧಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. ಭಯೋತ್ಪಾದಕರು ಧರ್ಮವನ್ನು ಕೇಳಿ 26 ಅಮಾಯಕ ಭಾರತೀಯರನ್ನು ಕೊಂದರು. ಈ ಭಯೋತ್ಪಾದಕ ದಾಳಿ ಇಡೀ ರಾಷ್ಟ್ರವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಈ ವೇಳೆ ನಮ್ಮ ಸರ್ಕಾರ ಸಂಪೂರ್ಣ ಸಿದ್ದತೆಗಳೊಂದಿಗೆ ಪಾಕ್​ ಭಯೋತ್ಪಾದಕರಿಗೆ ಬುದ್ಧಿ ಕಲಿಸಿತು. ಇದು ಸರ್ಕಾರದ ಸಮರ್ಪಣೆ, ಸಶಸ್ತ್ರ ಪಡೆಗಳ ಶೌರ್ಯ ಸಮಾಜದಲ್ಲಿನ ಏಕತೆಯನ್ನು ಪ್ರತಿನಿಧಿಸುತ್ತದೆ ಎಂದರು.

ಅಮೆರಿಕ ಇತ್ತೀಚೆಗೆ ಹೆಚ್ಚುವರಿ ಸುಂಕ ವಿಧಿಸಿರುವುದು ಎಲ್ಲರ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಪ್ರಪಂಚದೊಂದಿಗೆ ರಾಜತಾಂತ್ರಿಕತೆ ಹಾಗೂ ಆರ್ಥಿಕ ಸಂಬಂಧಗಳನ್ನು ಉಳಿಸಿಕೊಳ್ಳುವಾಗ ಮತ್ತು ಸ್ವಾವಲಂಬಿ ವಿಧಾನವನ್ನು ಅಳವಡಿಸಿಕೊಳ್ಳುವುದು ಅಗತ್ಯ ವಿಧಾನ ಎಂದರು. ದೇಶವು ಪರಸ್ಪರ ಅವಲಂಬನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಹೀಗೆ ಇರಬೇಕು ಎಂದು ಬಯಸುತ್ತವೆ. ಯಾವುದೇ ದೇಶ ಸ್ವದೇಶಿ ವಸ್ತುಗಳನ್ನು ಅವಲಂಬಿಸಿ, ಸ್ವಾವಲಂಬನೆಯತ್ತ ಗಮನ ಹರಿಸಬೇಕು. ಅದೇ ರೀತಿ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹಪರ ಸಂಬಂಧಗಳನ್ನು ಹೊಂದಬೇಕು ಎಂದು ತಿಳಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net