

Bigg Boss Kannad 12: ಬಿಗ್ಬಾಸ್ ಕನ್ನಡ ಶೋ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಜೊತೆಗೆ ಜನಸಾಮಾನ್ಯರಿಗೂ ಸಹ ಅವಕಾಶ ಕಲ್ಪಿಸಲಾಗಿದೆ. ಇದರ ಬಗ್ಗೆ ಸ್ವತಃ ಕಲರ್ಸ್ ಕನ್ನಡ ಹೊಸ ಪ್ರೋಮೋವನ್ನು ಹಂಚಿಕೊಳ್ಳುವ ಮೂಲಕ ದೊಡ್ಮನೆ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದೆ. ಆದರೆ ಜನಸಾಮಾನ್ಯರು ಸ್ಪರ್ಧಿಯಾಗಲ್ಲ, ಬದಲಿಗೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಬಹುದಾಗಿದೆ.
ದೊಡ್ಮನೆ ಎಂಟ್ರಿಗಾಗಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ಸೆಪ್ಟೆಂಬರ್ 28ರಿಂದ ಶುರುವಾಗಲಿದೆ ಎಂದು ಕಲರ್ಸ್ ಕನ್ನಡ ಈಗಾಗಲೇ ದೃಢಪಡಿಸಿದೆ. ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಯಾವೆಲ್ಲಾ ಕಂಟೆಸ್ಟೆಂಟ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬಹುದು ಎಂಬ ಪ್ರಶ್ನೆ ಮಾತ್ರ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಇದರ ನಡುವೆ ಈ ಬಾರಿ ಬಿಗ್ ಬಾಸ್ಗೆ ಜನಸಾಮಾನ್ಯರಿಗೂ ಎಂಟ್ರಿಯಿದೆ ಎಂದು ಕಲರ್ಸ್ ಕನ್ನಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
(ಏಜೆನ್ಸೀಸ್)
ನೀವೂ ಸಹ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಬೇಕಾದರೆ, ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ ರಾತ್ರಿ 1:30ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ಸ್ಗಳನ್ನು ನೋಡಿ ಪ್ರತಿ ಸೀರಿಯಲ್ನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸಹ ಜಿಯೋ ಹಾಟ್ಸ್ಟಾರ್ನಲ್ಲಿ ಸರಿಯಾಗಿ ಉತ್ತರಿಸಿದರೆ ಲಕ್ಕಿ ವಿನ್ನರ್ಸ್ಗೆ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಹೋಗುವ ಅವಕಾಶ ಇರಲಿದೆ. ಸಂಜೆ 6ರಿಂದ 10:30ರ ವರೆಗ ಪ್ರಸಾರವಾಗುವ ನಂದ ಗೋಕುಲ, ಯಜಮಾನ, ದೃಷ್ಟಿ ಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮೀ, ಮುದ್ದು ಸೊಸೆ, ನಿನಗಾಗಿ, ಭಾರ್ಗವಿ ಮತ್ತು ರಾಮಾಚಾರಿ ಧಾರಾವಾಹಿಗಳನ್ನು ನೋಡಿ ಅದರಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಿಗ್ ಬಾಸ್ ಮನೆಗೆ ಹೋಗಬಹುದಾಗಿದೆ.