'ಜೈಲಿಗೆ ಹೋಗಿ ಬಂದಾಗಿನಿಂದ ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ'

cpy
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ತಿಹಾರ್​ ಜೈಲಿಗೆ ಹೋಗಿಬಂದ ನಂತರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್​ ಕಾಲೆಳೆದಿದ್ದಾರೆ. ತಾವು ಅವರ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಕಾರ್ಯಕರ್ತರಾಗಿ ಬಂದು ಸೇರಿಕೊಳ್ಳಿ ಎಂದೂ ಅವರು ಹೇಳಿದ್ದಾರೆ.

ಸಿ.ಪಿ ಯೋಗೇಶ್ವರ್ ಅವರು ಮಠಗಳಿಗೆ ಲ್ಯಾಪ್​ಟಾಪ್​ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ ಸಿಡಿ ತೋರಿಸಿ ಬರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್​ ಅವರು ಕೊಟ್ಟಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿವೈ ಈ ಮಾತುಗಳನ್ನು ಹೇಳಿದ್ದಾರೆ. ಸಿಡಿ ಸಂಸ್ಕೃತಿಯನ್ನ ಡಿಕೆಯಿಂದಲೇ ಕೇಳಿ.. ನನ್ನನ್ನ ಸಮಾಜದಲ್ಲಿ ಕಳಂಕಿತನನ್ನಾಗಿ ಮಾಡೋಕೆ ಈ ಪ್ರಯತ್ನ ಮಾಡಿದ್ದಾರೆ. ನಾನು ಸುತ್ತೂರು ಮಠಕ್ಕೆ‌ ಹೋಗಿದ್ದೆ. ಆದಿಚುಂಚನಗಿರಿ ಮಠಕ್ಕೂ ಹೋಗಿ ಬಂದಿದ್ದೆ. ತಿಹಾರ್​ ಜೈಲಿಗೆ ಹೋಗಿಬಂದಿರುವ ಡಿಕೆಶಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಏನೇನೋ ಮಾತನಾಡುತ್ತಾರೆ ಎಂದು ಸಿಪಿವೈ ಗುಡುಗಿದ್ದಾರೆ.

ಡಿಕೆಶಿ ಅವರಿಗೆ ನಮ್ಮ‌ಪಾರ್ಟಿ ವಿಚಾರ ಯಾಕೆ ಬೇಕು? ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ಇದು ಅವರಿಗೆ ಶೋಭೆ ತರುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿಯೇ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ನಮ್ಮ ಪಕ್ಷಕ್ಕೆ ಬನ್ನಿ, ಇಲ್ಲಿ ಕಾರ್ಯಕರ್ತರಾಗಿ ದುಡಿಯಿರಿ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net