

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆ ಪ್ರಕರಣ ಸಂಬಂಧ ಸ್ಫೋಟಕ ವಿಚಾರ ಕ್ಷಣ ಕ್ಷಣಕ್ಕೂ ಬಯಲಾಗುತ್ತಿದೆ.
ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿ ನವೀನ್, ಬಿಜೆಪಿ ಕಾರ್ಯಕರ್ತ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ನವೀನ್ನನ್ನು ನವೀನ್ ವಿಚಾರಣೆ ನಡೆಸಿರೋ ಪೊಲೀಸರು ಹೇಳೋದೇ ಬೇರೆ. ಅದ್ಹೇನು ಗೊತ್ತಾ?
ನವೀನ್ ಕಣಕಣದಲ್ಲೂ ಕಾಂಗ್ರೆಸ್ ಆವರಿಸಿದೆ. ಆತನಿಗೆ ಕಾಂಗ್ರೆಸ್ ಬಿಟ್ಟರೇ ಬೇರೆ ಯಾವ ಪಕ್ಷದ ಮೇಲೂ ಒಲವು ಇಲ್ಲ. ಮಾವ (ಅಖಂಡ ಶ್ರೀನಿವಾಸ್ ಮೂರ್ತಿ)ನ ರಾಜಕೀಯಕ್ಕೆ ನವೀನ್ ಕುಟುಂಬದ ಸಂಪೂರ್ಣ ಬೆಂಬಲವಿತ್ತು. ನವೀನ್ ತಾಯಿ ಜಯಂತಿ ಮುಂಬರುವ ಕಾರ್ಪೋರೇಟ್ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅವರಿಗೆ ಮುನೇಶ್ವರ ವಾರ್ಡ್ ಟಿಕೆಟ್ ಪಡೆಯಲು ತಯಾರಿ ನಡೆದಿತ್ತು ಎಂಬ ವಿಚಾರ ಬಯಲಾಗಿದೆ.