

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆಯ ಹಿಂಧೆ ಉಗ್ರರ ಕೈವಾಡದ ಬಗ್ಗೆಯೂ ಶಂಕೆ ಮೂಡಿದೆ. ಇದಕ್ಕೆ ಗಲಭೆ ಸ್ಥಳದಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಕಾರಣ. ಗಲಭೆ ವೇಳೆ ರಾಸಾಯನಿಕ ಪುಡಿ ಬಳಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಅಧಿಕಾರಿಗಳು, ಉಗ್ರರ ಕೈವಾಡದ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಫೇಸ್ಬುಕ್ನಲ್ಲಿ ವಿವಾದಾತ್ಮಕ ಫೋಸ್ಟ್ಗೆ ಸ್ಥಳೀಯರಿಗೆ ಪ್ರಚೋದನೆ ಕೊಟ್ಟು ಉಗ್ರವಾದದ ಕಡೆಗೆ ಸೆಳೆಯುವ ಕುತಂತ್ರ ತಳ್ಳಿ ಹಾಕುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!
ಇದೇ ಕಾರಣಕ್ಕಾಗಿ ಆ.11ರ ಸಂಜೆಯಿಂದ ಆ.12ರ ನಡುವೆ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಸುತ್ತಲ ಪ್ರದೇಶದ ಮೊಬೈಲ್ ಫೋನ್ ನೆಟ್ ವರ್ಕ್ ಗಳನ್ನು ಪರಿಶೀಲಿಸುತ್ತಿದ್ದಾರೆ. ದೇಶದ ಗಡಿದಾಟಿ ಹೋಗಿರುವ ಕರೆ ಮತ್ತು ಅನುಮಾನಾಸ್ಪದ ದೂರವಾಣಿ ಕರೆಗಳನ್ನು ಸೈಬರ್ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.