More

    ಗಿರ್ಕಿ ಹೊಡೆಯುತ್ತಿರುವ ದಿವ್ಯ ಉರುಡುಗ..

    ಬೆಂಗಳೂರು: ಕಾಮಿಡಿ ನಟ ತರಂಗ ವಿಶ್ವ ಇದೀಗ ಸದ್ದಿಲ್ಲದೆ ನಿರ್ವಪಕರಾಗಿದ್ದಾರೆ. ‘ಗಿರ್ಕಿ’ ಎಂಬ ಚಿತ್ರವನ್ನು ನಿರ್ವಿುಸುವುದರ ಜತೆಗೆ ಅದರಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಟ ಶರಣ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

    ವಿಶ್ವ ಅವರ ಈ ಬೆಳವಣಿಗೆಗೆ ಅವರ ತಂದೆಯ ಪ್ರೋತ್ಸಾಹ ಕಾರಣವಂತೆ. ‘ಈ ಚಿತ್ರದಲ್ಲಿ ಲವ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಎಲ್ಲವೂ ಇದೆ. ಚಿತ್ರ ನಿರ್ವಿುಸುವುದರ ಜತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಎಲ್ಲ ಅಂದುಕೊಂಡಂತೆ ಆದರೆ, ಚಿತ್ರ ಮೇನಲ್ಲಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ವಿಶ್ವ. ಈ ಚಿತ್ರದ ಒಂದು ವಿಶೇಷತೆಯೆಂದರೆ, ‘ಬಿಗ್ ಬಾಸ್’ ಖ್ಯಾತಿಯ ದಿವ್ಯ ಉರುಡುಗ ನಟಿಸಿರುವುದು. ದಿವ್ಯಗೆ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಈಗ ಒಂದು ಗ್ಯಾಪ್​ನ ನಂತರ ಪುನಃ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಯೋಗರಾಜ್ ಭಟ್ ಜತೆಗೆ ಕೆಲಸ ಮಾಡಿರುವ ಅನುಭವವಿರುವ ಪಿ.ಎಂ. ವೀರೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ರಾಶಿ ಮಹದೇವ್ ಸಹ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts