ಹೌದು, 'ಅರಸು' ಚಿತ್ರದ ಹಾಡು ''ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ'' ತುಂಬಾನೆ ಫೇಮಸ್. ಅಪ್ಪು, ರಮ್ಯಾ ಒಟ್ಟಿಗೆ ನಟಿಸಿರುವು ಮೂರು ಸಿನಿಮಾಗಳಲ್ಲಿ ಈ ಹಾಡು ಅತ್ಯುತ್ತಮ ಎನಿಸಿಕೊಂಡಿದೆ. ಸದ್ಯ, ಇದೇ ಹಾಡಿಗೆ ವಿವಿಧ ಎಕ್ಸ್ಪ್ರೆಶನ್ ಕೊಟ್ಟು ನಟಿ ರಮ್ಯಾ ತಮ್ಮ ಇನ್ಸ್ಟಾಗ್ರಂ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ, ರಮ್ಯಾ ತಾವೇ ವಿಡಿಯೋದಲ್ಲಿ ನಟಿಸದೆ ಇನ್ಸ್ಟಾಗ್ರಂ ಫಿಲ್ಟರ್ಗಳನ್ನು ವಿಡಿಯೋದಲ್ಲಿ ಬಳಸಿದ್ದಾರೆ. ವಿಡಿಯೋದಲ್ಲಿ ಹಾಡಿಗೆ ತಕ್ಕಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಮೋಹಕ ತಾರೆಯ ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ಲಭಿಸುತ್ತಿದೆ. ಈ ವಿಶೇಷ ವಿಡಿಯೋವನ್ನು ಲಕ್ಷ ಗಟ್ಟಲೆ ಜನ ವೀಕ್ಷಿಸಿದ್ದು, 50,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.