ಬ್ರಸೆಲ್ಸ್: 65 ವರ್ಷದ ವ್ಯಕ್ತಿಯೊಬ್ಬರು ವಿಚ್ಛೇದನ ನೀಡಲು ಮುಂದಾಗಿರುವ ಪ್ರಕರಣವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಟಿಕ್‌ಟಾಕ್‌ನಲ್ಲಿ ಪರಿಚಯವಾದ ಹುಡುಗಿಯನ್ನು ಮದುವೆಯಾಗಲು ಆ ವ್ಯಕ್ತಿ ತನ್ನ ಹೆಂಡತಿಗೆ ವಿಚ್ಛೇದನ(Divorce) ನೀಡಲು ಮುಂದಾಗಿದ್ದಾರೆ. ಆ ವೃದ್ಧನ ಯುರೋಪಿಯನ್ ಕುಟುಂಬವು ಇದರ ಬಗ್ಗೆ ತೀವ್ರ ಚಿಂತಿತವಾಗಿದೆ.
ಆ ಯುರೋಪಿಯನ್ ವ್ಯಕ್ತಿಯು ನೈಜೀರಿಯಾದ ಲಾಗೋಸ್‌ಗೆ ಹೋಗಿ ಆ ಹುಡುಗಿಯನ್ನು ಮದುವೆಯಾಗಲು ಬಯಸುತ್ತಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆ ಯುವತಿಯೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದಾರೆ. ಅವನು ಆ ಹುಡುಗಿಗೆ ಹಲವು ಬಾರಿ ಹಣವನ್ನೂ ಕಳುಹಿಸಿದ್ದಾನೆ. ವೀಸಾ ಮಾಡಿಸಲು ಹಣವನ್ನೂ ಕೊಟ್ಟರು ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.
ಈ ಘಟನೆಯನ್ನು ಆ ವ್ಯಕ್ತಿಯ ಸೋದರಳಿಯ ಎಂದು ಗುರುತಿಸಿಕೊಳ್ಳುವ ರೆಡ್ಡಿಟ್ ಬಳಕೆದಾರರು ಕುಟುಂಬದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ಅವರು ಮಾಡಿರುವ ಪೋಸ್ಟ್ನಲ್ಲಿ, ಇದು ಒಂದು ವರ್ಷದ ಹಿಂದೆ ಪ್ರಾರಂಭವಾಯಿತು. ನನ್ನ ಚಿಕ್ಕಪ್ಪನಿಗೆ 65 ವರ್ಷ ಅವರು ವಿವಾಹಿತರು. ಅವನು ಟಿಕ್‌ಟಾಕ್‌ನಲ್ಲಿ ಸುಮಾರು 20 ರಿಂದ 25 ವರ್ಷ ವಯಸ್ಸಿನ ಯುವತಿಯನ್ನು ಭೇಟಿಯಾದರು. ಆತ ಅವಳೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದರು ನಂತು ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಂದಿನಿಂದ ಅವನು ಅವಳಿಗೆ ಹಲವಾರು ಬಾರಿ ಹಣವನ್ನು ಕಳುಹಿಸಿದ್ದಾನೆ. ಅದಕ್ಕೆ ಬೇರೆ ಬೇರೆ ಕಾರಣಗಳನ್ನು ನೀಡುತ್ತಾನೆ. ಕುಟುಂಬ ಸದಸ್ಯರು ಅವನನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವನು ತನ್ನ ನಿರ್ಧಾರಕ್ಕೆ ಬದ್ಧನಾಗಿದ್ದಾನೆ. ಆತನ ವಿರುದ್ಧ ದೊಡ್ಡ ವಂಚನೆ ನಡೆಯಬಹುದು ಎಂಬ ಆತಂಕ ನಮಗಿದೆ ಎಂದು ಬರೆದಿದ್ದಾರೆ.
ಚಿಕ್ಕಪ್ಪ ನಮ್ಮ ಮಾತನ್ನು ಕೇಳಲು ಸಿದ್ಧರಿಲ್ಲ ಎಂದು ಆತ ಹೇಳಿದ್ದಾನೆ. ಈ ಹಗರಣದ ಬಗ್ಗೆ ನಮ್ಮ ಕಳವಳಗಳನ್ನು ಅವರು ತಳ್ಳಿಹಾಕುತ್ತಾರೆ. ತಮಗೆ ಯಾವುದೇ ತಪ್ಪು ಆಗುತ್ತಿಲ್ಲ ಎಂದು ಅವರಿಗೆ ಅನಿಸುತ್ತಿದೆ. ಇದರಿಂದ ವಂಚನೆಯಾಗಬಹುದೆಂದು ಚಿಕ್ಕಪ್ಪ ನಂಬುವುದಿಲ್ಲ. ನನ್ನ ಕುಟುಂಬದವರು ಅಲ್ಲಿ ದರೋಡೆ ಮಾಡಬಹುದು, ಅಥವಾ ಅವರನ್ನು ಹಿಂಸಿಸಲಾಗುತ್ತದೆ ಅಥವಾ ಕೊಲ್ಲಬಹುದು ಎಂದು ಹೆದರುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.
ಈ ವ್ಯಕ್ತಿಯ ಪೋಸ್ಟ್ನಲ್ಲಿನ ವಿಷಯವು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಜನತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿಯೇ ಅವನಿಗೆ ಏನಾದರೂ ದೊಡ್ಡ ಘಟನೆ ಸಂಭವಿಸುವ ಸಾಧ್ಯತೆಯಿದೆ, ಆ ಯುವತಿ ಈತನನ್ನು ಭೇಟಿಯಾಗದಿರಲು ನೆಪ ಹೇಳಿ ಅವರನ್ನು ದೂರವಿಡಬಹುದು, ಆಕೆ ಈ ವ್ಯಕ್ತಿಯಿಂದ ಹೆಚ್ಚು ಹೆಚ್ಚು ಹಣವನ್ನು ಪಡೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)