ಹೆಬ್ರಿಯಲ್ಲಿ ಕಸಾಪ ಕೃತಜ್ಞತಾ ಸಭೆ

New Project (58)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಿದವರಿಗೆ ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೃತಜ್ಞತೆ ಸಲ್ಲಿಕೆ ಹಾಗೂ ಲೆಕ್ಕಪತ್ರ ಮಂಡನೆ ಸಭೆ ಶಿವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಸಮ್ಮೇಳನ ಸ್ವಾಗತ ಸಮಿತಿ ಸಮಿತಿ ಅಧ್ಯಕ್ಷ ಗಣೇಶ ಹಾಂಡ, ಸಂಚಾಲಕ ರಮಾನಂದ ಶೆಟ್ಟಿ ಮಾತನಾಡಿದರು. ಕಸಾಪಾ ಹೆಬ್ರಿ ಘಟಕಾಧ್ಯಕ್ಷ ಶ್ರೀನಿವಾಸ ಭಂಡಾರಿ ಸಮ್ಮೇಳನದ ಆಯವ್ಯಯ ವಿವರವನ್ನು ಮಂಡಿಸಿದರು.

ಗೌರವಾಧ್ಯಕ್ಷ ಹರಿದಾಸ ಬಿ.ಸಿ ರಾವ್ ಶಿವಪುರ, ಶಂಕರನಾರಾಯಣ ಕೊಡಂಚ, ಮುಖ್ಯ ಶಿಕ್ಷಕಿ ಗುಲಾಬಿ, ಪ್ರಮುಖರಾದ ಮೂರ್ಸಾಲು ಮೋಹನದಾಸ ನಾಯಕ್, ಸುರೇಶ ಶೆಟ್ಟಿ, ವರಂಗ ರಾಮಚಂದ್ರ ಭಟ್, ವಿಶ್ವನಾಥ ನಾಯಕ್, ಜಗನಾಥ ಕುಲಾಲ್, ಸಂತೋಷ ಶೆಟ್ಟಿ, ರಾಘವೇಂದ್ರ ಪ್ರಭು, ಶೈಲಜಾ ಶಿವಪುರ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ ಕುಮಾರ್ ಪ್ರಸ್ತಾವನೆಗೈದರು. ಪದಾಧಿಕಾರಿ ಮಹೇಶ ಹೈಕಾಡಿ ವಂದಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net