

ಗೋಳಿಯಂಗಡಿ: ತೊಂಬತ್ತು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಖಂಡ ಭಜನಾ ಕಾರ್ಯಕ್ರಮ ಬುಧವಾರ ಬೆಳಗ್ಗೆಯಿಂದ ಆರಂಭಗೊಂಡು ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು.
ದೇವರಿಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಪೂಜೆ ನಡೆಯಿತು. ಹೆಂಗವಳ್ಳಿ ಮಹಾಗಣಪತಿ ಭಜನಾ ಮಂಡಳಿ, ಹೆಂಗವಳ್ಳಿ ಮಹಾಗಣಪತಿ ಮಹಿಳಾ ಭಜನಾ ಮಂಡಳಿ, ತೊಂಬತ್ತು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಹೆಂಗವಳ್ಳಿ ಶ್ರೀ ವೀರಭದ್ರ ಭಜನಾ ಮಂಡಳಿ, ನಂದಿಕೋಣ ಭಜನಾ ಮಂಡಳಿ, ಹಳೇ ಸೋಮೇಶ್ವರ ಶ್ರೀಲಕ್ಷ್ಮೀ ನರಸಿಂಹ ಮಹಿಳಾ ಭಜನಾ ಮಂಡಳಿ, ತೊಂಬಟ್ಟು ಮಹಾಗಣಪತಿ ಭಜನಾ ಮಂಡಳಿ, ಮರೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಮರೂರು ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ನರಸಿಪುರ ಭಜನಾ ಮಂಡಳಿ, ಹೆಂಗವಳ್ಳಿ ಶ್ರೀ ಭಜನಾ ಮಂಡಳಿ, ಬೆಪ್ಡೆ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಬೆಪ್ಡೆ ಶ್ರೀ ಉಮಾಮಹೇಶ್ವರ ಮಹಿಳಾ ಭಜನಾ ಮಂಡಳಿ, ಕಕ್ಕುಂಜೆ ಕಂಬಿಕಲ್ಲು ಮಹಾಗಣಪತಿ ಭಜನಾ ಮಂಡಳಿ, ಯಳಂತೂರು ಶ್ರೀ ದುರ್ಗಾ ಭಜನಾ ಮಂಡಳಿ, ನರಸಿಪುರ ದುರ್ಗಾದೇವಿ ಭಜನಾ ಮಂಡಳಿ ತಂಡ ಭಜನಾ ಮಂಗಲೋತ್ಸವದಲ್ಲಿ ಪಾಲ್ಗೊಂಡವು.