

ಹುಬ್ಬಳ್ಳಿ: ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಹಂತ ಹಂತವಾಗಿ ಕಾರ್ವಿುಕ ಭವನಗಳನ್ನು ನಿರ್ವಿುಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ಇಲ್ಲಿನ ಕೃಷ್ಣಾಪುರದಲ್ಲಿ ನಿರ್ವಿುಸಿರುವ ಧಾರವಾಡ ಜಿಲ್ಲಾ ಕಾರ್ವಿುಕ ಇಲಾಖೆಯ ಕಾರ್ವಿುಕ ಭವನವನ್ನು ಬುಧವಾರ ಉದ್ಘಾಟಿಸಿ, 3 ಸಂಚಾರಿ ಚಿಕಿತ್ಸಾ ಘಟಕ ‘ಶ್ರಮಿಕ್ ಸಂಜೀವಿನಿ’ಯನ್ನು ಲೋಕಾರ್ಪಣೆಗೊಳಿಸಿದ ನಂತರ ಮಾತನಾಡಿದರು. ಕಾರ್ವಿುಕರ ಹಿತ ಕಾಯವುದು, ಅಭಿವೃದ್ಧಿ ಯೋಜನೆ ರೂಪಿಸುವ ಕೆಲಸವನ್ನು ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ್ ಮಾಡುತ್ತಿದ್ದಾರೆ. ರಾಜ್ಯದ ಎಂಟು ಜಿಲ್ಲೆ ಹಾಗೂ ಹುಬ್ಬಳ್ಳಿಯಲ್ಲಿ ಕಾರ್ವಿುಕ ಭವನ ನಿರ್ವಿುಸಲಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಕಾರ್ವಿುಕ ಇಲಾಖೆ ಕಚೇರಿ, ಸಂಬಂಧಿಸಿದ ಇತರ ಕಚೇರಿ, ಕಾರ್ವಿುಕ ನ್ಯಾಯಾಲಯ ಸ್ಥಾಪಿಸಿ ಒಂದೇ ಸೂರಿನಡಿ ಕಾರ್ವಿುಕರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕಾರ್ವಿುಕರ ಹಿತಾಸಕ್ತಿ ಕಾಪಾಡಿ, ಎಲ್ಲ ರೀತಿಯ ಸವಲತ್ತು ಹಾಗೂ ನೆರವುಗಳನ್ನು ಕಾರ್ವಿುಕ ಇಲಾಖೆ ನೀಡಿದೆ ಎಂದು ಬೊಮ್ಮಾಯಿ ಶ್ಲಾಘಿಸಿದರು. ಕಾರ್ವಿುಕರ ಆಂಬುಲೆನ್ಸ್ನಲ್ಲಿ (ಶ್ರಮಿಕ್ ಸಂಜೀವಿನಿ) ಆಕ್ಸಿಜನ್ ಸೌಲಭ್ಯ, ರಕ್ತ ಹಾಗೂ ಮೂತ್ರ ತಪಾಸಣೆ ಪ್ರಯೋಗಾಲಯ ಇದೆ. ಇನ್ನಷ್ಟು ಸೌಲಭ್ಯ ನೀಡುವ ಕುರಿತು ಕೇಳಿದ್ದಾರೆ. ಮುಂದಿನ ಬಜೆಟ್ನಲ್ಲಿ ನೀಡುವ ಕುರಿತು ತೀರ್ವನಿಸಲಾಗುವುದು ಎಂದರು. ಸಚಿವರಾದ ಶಿವರಾಮ ಹೆಬ್ಬಾರ್, ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಎಸ್.ಟಿ. ಸೋಮಶೇಖರ್, ಆನಂದ ಸಿಂಗ್, ಕಾರ್ವಿುಕ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ. ಕಲ್ಪನಾ, ಕಾರ್ವಿುಕ ಆಯುಕ್ತ ಅಕ್ರಂ ಪಾಷಾ ಇತರರು ಇದ್ದರು.
ಸೌಲಭ್ಯಗಳೇನು?: ಸಂಚಾರಿ ಆರೋಗ್ಯ ಕ್ಲಿನಿಕ್ನಲ್ಲಿ ಅತ್ಯಾಧುನಿಕ ಸ್ಟ್ರಚರ್, ಹಾಸಿಗೆ, ಆಕ್ಸಿಜನ್ ಪರಿಕರ, ಪ್ರಥಮ ಚಿಕಿತ್ಸೆ ಕಿಟ್, ಲ್ಯಾಬ್ ಯಂತ್ರ, ಜೀವನಾವಶ್ಯಕ ಔಷಧ, ರಕ್ತದೊತ್ತಡ, ಆಪರೇಟಸ್, ಇಸಿಜಿ, ರೆಫ್ರಿಜರೇಟರ್, ಕೋವಿಡ್ ಪರೀಕ್ಷಾ ಸಲಕರಣೆಗಳು, ವ್ಹೀಲ್ ಚೇರ್, ಇತರ ಪ್ರಯೋಗಾಲಯ ಮತ್ತು ವೈದ್ಯಕೀಯ ಸಲಕರಣೆ, ವೈದ್ಯಕೀಯ ಸಿಬ್ಬಂದಿ ಪ್ರಯಾಣಿಸಲು ಆಸನ ವ್ಯವಸ್ಥೆ ಸೇರಿ ಇನ್ನಿತರ ಸೇವಾ ಕೇಂದ್ರಗಳಲ್ಲಿ ಸೇವೆ ನೀಡಲು ಸೌಲಭ್ಯಗಳಿವೆ.
ಸೇವೆಗಾಗಿ 155214ಕ್ಕೆ ಕರೆ ಮಾಡಿ: ‘ಸಂಚಾರಿ ಆರೋಗ್ಯ ಕ್ಲಿನಿಕ್’ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ತುರ್ತು ಸಂದರ್ಭದಲ್ಲಿ ಸಂರ್ಪಸಲು ಇಲಾಖೆಯು 24 ಗಂಟೆ ಅವಧಿಯ 155214 ಸಹಾಯವಾಣಿ ಸಂಖ್ಯೆ ತೆರೆದಿದೆ. ಕಾರ್ವಿುಕರು ಈ ಸೇವೆಯನ್ನು ಪಡೆಯಲು ಸಹಾಯವಾಣಿಗೆ ಕರೆ ಮಾಡಿದಾಗ ಸಿಬ್ಬಂದಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ ಕಲ್ಯಾಣ ಮಂಡಳಿ ಸದಸ್ಯರು ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಬಳಿಕ, ಅವರಿಗೆ ಬೇಕಾದ ವೈದ್ಯಕೀಯ ಸೇವೆಯನ್ನು ಸಂಚಾರಿ ಆರೋಗ್ಯ ಕ್ಲಿನಿಕ್ ಸಿಬ್ಬಂದಿಗೆ ರವಾನಿಸಲಾಗುತ್ತದೆ.
ಸೇವೆಗಳ ವಿವರ: ಪ್ರಥಮ ಚಿಕಿತ್ಸೆ, ಪ್ರಯೋಗಾಲಯ ಪರೀಕ್ಷೆಗಳು, ಕೋವಿಡ್ ಪರೀಕ್ಷೆ, ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮ, ಅನುಸರಣಾ ಸೇವೆ, ಕುಟುಂಬ ಯೋಜನೆ ಸೇವೆ, ಪ್ರಸರ್ವ ಪೂರ್ವ ಮತ್ತು ನಂತರ ಚಿಕಿತ್ಸೆ, ಚುಚ್ಚುಮದ್ದು, ಸಮಾಲೋಚನೆ ಸೇವೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಆರೋಗ್ಯ ಶಿಕ್ಷಣ ಮತ್ತು ಪರಿಸರ ನೈರ್ಮಲ್ಯ, ಇತರ ನಿರ್ದೇಶಿತ ಆರೋಗ್ಯ ಸೇರಿ ಇನ್ನಿತರ ಸೇವೆಗಳು ಕಾರ್ವಿುಕರಿಗೆ ಸಿಗಲಿವೆ. ಸಂಚಾರಿ ಆರೋಗ್ಯ ಕ್ಲಿನಿಕ್ ಸೇವೆಯನ್ನು ಒದಗಿಸಲು ಸ್ಕೂಡ್ವೆಸ್ ಸಂಸ್ಥೆಯನ್ನು ಗುರುತಿಸಲಾಗಿದೆ. ಸೇವೆಗಳ ಆನ್ಲೈನ್ ವರದಿಗಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜಿಪಿಎಸ್ ಟ್ರೇಸಿಂಗ್ ಸಿಸ್ಟಂ ಅಳವಡಿಸಲಾಗಿದೆ. ಪ್ರತಿ ರೋಗಿಯ ವಿವರಗಳನ್ನು ಎಂಐಎಸ್ ವರದಿ ಸಿಸ್ಟಂನಲ್ಲಿ ನಮೂದಿಸಲಾಗುತ್ತದೆ.
ಚಿಕಿತ್ಸೆ ಹೇಗೆ?: ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ವಿುಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶಗಳನ್ನು ಗುರುತಿಸಿ ನಿಗದಿಪಡಿಸಿದ ವೇಳಪಟ್ಟಿಯಂತೆ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯ, ಶುಶ್ರೂಷಕಿ, ಫಾರ್ವಸಿಸ್ಟ್, ಲ್ಯಾಬ್ ಟೆಕ್ನಿಷಿಯನ್ ಮತ್ತು ಚಾಲಕ ಸೇರಿ ಆರು ಸಿಬ್ಬಂದಿ ಒಳಗೊಂಡ ಈ ಸಂಚಾರಿ ವಾಹನ ಸೋಮವಾರದಿಂದ ಶನಿವಾರದವರೆಗೆ ನಿಗದಿತ ಪ್ರದೇಶಗಳಿಗೆ ಭೇಟಿ ಆರೋಗ್ಯ ಸೇವೆ ನೀಡಲಿದೆ. ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ಕಾರ್ವಿುಕರಿಗೂ ಕ್ರಮ ಸಂಖ್ಯೆ ನೀಡಿ ಪ್ರತ್ಯೇಕ ಒಪಿಡಿ ಪುಸ್ತಕ ನೀಡಲಾಗುತ್ತದೆ. ತುರ್ತು ಚಿಕಿತ್ಸೆ ಅಥವಾ ಅಪಘಾತ ಸಂದರ್ಭ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಇಎಸ್ಐ, ಸಿಎಚ್ಸಿ ಅಥವಾ ಜಿಲ್ಲಾಸ್ಪತ್ರೆಗೆ ಸೂಚಿಸಲಾಗುತ್ತದೆ.