ಕಲಿಕಾ ಹಬ್ಬ ಮಕ್ಕಳ ಸಾಧನೆಗೆ ಸ್ಫೂರ್ತಿ

New Project (59)
Published on

ಬೆಳ್ವೆ:

ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣಕ್ಕೆ ಅವಕಾಶಗಳಿವೆ. ಕಲಿಕಾ ಹಬ್ಬ ಮಕ್ಕಳಿಗೆ ಹೆಚ್ಚಿನ ಸಾಧನೆಗೆ ಸ್ಫೂರ್ತಿ ನೀಡುತ್ತದೆ ಎಂದು ಬೆಳ್ವೆ ಗ್ರಾಪಂ ಅಧ್ಯಕ್ಷೆ ರಾಧಾ ಹೇಳಿದರು.

ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಬಾಡಿ-ಆರ್ಡಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಆನಂದ ಪೂಜಾರಿ ಅಲ್ಬಾಡಿ ಅಧ್ಯಕ್ಷತೆ ವಹಿಸಿದರು. ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು., ಅಲ್ಬಾಡಿ ಆರ್ಡಿ ಕ್ಲಸ್ಟರ್ ಸಿಆರ್‌ಪಿ ಅನುಪ್‌ಕುಮಾರ್ ಶೆಟ್ಟಿ, ಬಿದ್ಕಲ್‌ಕಟ್ಟೆ ಸಿಆರ್‌ಪಿ ನಾಗರಾಜ ಆಚಾರ್ಯ, ದೈಹಿಕ ಶಿಕ್ಷಣ ಶಿಕ್ಷಕ ಕಿಶನ್‌ರಾಜ್ ಶೆಟ್ಟಿ ಬೆಳ್ವೆ, ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷೆ ಮನುಶ್ರೀ ಶೆಟ್ಟಿ, ಗೌರವ ಸಲಹೆಗಾರ ಸುದೀಪ್ ಶೆಟ್ಟಿ ಅಲ್ಬಾಡಿ, ದಿನಕರ ಶೆಟ್ಟಿ ಗುಡ್ಡಿಮನೆ, ಎಸ್‌ಡಿಎಂಸಿ ಉಪಾಧ್ಯಕ್ಷೆ ಪಾರ್ವತಿ ಅಲ್ಬಾಡಿ, ಮುಖ್ಯ ಶಿಕ್ಷಕ ಹೆರಿಯಣ್ಣ ನಾಯ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಹೆರಿಯಣ್ಣ ನಾಯ್ಕ ಸ್ವಾಗತಿಸಿ, ಹಾಲಾಡಿ ವೃತ್ತ ಶಿಕ್ಷಣ ಸಂಯೋಜಕ ಶೇಖರ್ ಯು. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಕನ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಆರ್‌ಪಿ ಅನುಪ್‌ಕುಮಾರ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net