

ಕೋಟ: ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದ ಸಮೀಪದಲ್ಲಿ ಪಂಚವರ್ಣ ಸಂಘಟನೆಯ ಸಹಕಾರದೊಂದಿಗೆ ಕೋಟ ವಾಸುದೇವ ನಾಯಕ್ ಸ್ಮರಣಾರ್ಥ ಅವರ ಪುತ್ರರಾದ ರಾಘವ ನಾಯಕ್ ಹಾಗೂ ಸಹೋದರರ ವತಿಯಿಂದ ನಿರ್ಮಾಣಗೊಂಡ ಬಸ್‌ತಂಗುದಾಣವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.
ಕೋಟತಟ್ಟು ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ದೀಪ ಬೆಳಗಿದರು. ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ತಂಗುದಾಣ ಸಮೀಪ ಗಿಡ ನೆಟ್ಟರು.
ರಾಘವ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್ ಪುತ್ರ ರಘುರಾಮ್ ನಾಯಕ್, ವತ್ಸಲಾ ರಾಧಕೃಷ್ಣ ನಾಯಕ್, ಪ್ರಮುಖರಾದ ಮನೋಹರ್ ಪೂಜಾರಿ, ಲಲಿತಾ ಪೂಜಾರಿ, ಶೇವಧಿ ಸುರೇಶ್ ಗಾಣಿಗ, ರಮೇಶ್ ಪಡಿಯಾರ್, ಶ್ರೀಕಾಂತ್ ಶೆಣೈ, ಸತೀಶ್ ಜಿ ಹೆಗ್ಡೆ, ರಮೇಶ್ ಹೆಗ್ಡೆ, ವೆಂಕಟೇಶ ಹೆಗ್ಡೆ, ಗೌತಮ್ ಶೆಣೈ, ಅಜಿತ್ ದೇವಾಡಿಗ, ಸಂತೋಷ್ ಪ್ರಭು, ಸದಾನಂದ ಪೂಜಾರಿ, ಪ್ರಸಾದ್ ಬಿಲ್ಲವ, ಶಶಿಧರ ತಿಂಗಳಾಯ, ಕಲಾವತಿ ಉಪಸ್ಥಿತರಿದ್ದರು. ಅಜಿತ್ ಆಚಾರ್ ಸ್ವಾಗತಿಸಿದರು. ರವೀಂದ್ರ ಕೋಟ ಸಂಯೋಜಿಸಿದರು. ಸುಜಾತ ಬಾಯರಿ ನಿರೂಪಿಸಿದರು.