ವಲಯಮಟ್ಟದ ಜಿನ ಭಜನಾ ಸ್ಪರ್ಧೆ ಯಶಸ್ವಿ

Bel_Jina Bhajan
Published on

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ಪ್ರೋತ್ಸಾಹದಿಂದ ಬೆಳ್ತಂಗಡಿ ಜೈನ್‌ಮಿಲನ್ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಲಯಮಟ್ಟದ ಜಿನ ಭಜನಾ ಸ್ಪರ್ಧೆ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆದು ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಿನಭಜನಾ ಸ್ಪರ್ಧೆಯ ಸಂಯೋಜಕ ಸೋನಿಯಾ ಯಶೋವರ್ಮ ಹೇಳಿದರು.

ಉಜಿರೆಯಲ್ಲಿ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕೋಶಾಧಿಕಾರಿ ನಿತಿನ್ ಜೈನ್ ಲೆಕ್ಕಪತ್ರ ಮಂಡಿಸಿದರು. ಜಿನ ಭಜನೆಗಳಿಗೆ ರಾಗ ಸಂಯೋಜನೆ ಮಾಡಿ ಸಹಕರಿಸಿದ ಕಮಲಾಕ್ಷ ಮತ್ತು ಪಾರ್ಶ್ವನಾಥ್ ಜೈನ್ ಅವರನ್ನು ಗೌರವಿಸಲಾಯಿತು.

ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ಉಜಿರೆಯ ಡಾ.ನವೀನ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆ ಇನ್ನೂ ಹೆಚ್ಚಿನ ಕಾರ್ಯಕ್ರಮ ರೂಪಿಸಲು ಉತ್ಸಾಹ, ಪ್ರೇರಣೆ ದೊರಕಿದೆ. ಸದ್ಯದಲ್ಲೇ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಸಲು ಯೋಜಿಸಲಾಗಿದೆ ಎಂದರು.

ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಉಜಿರೆಯ ಡಾ.ನವೀನ್ ಕುಮಾರ್ ಜೈನ್ ಮಾತನಾಡಿದರು. ಬೆಳ್ತಂಗಡಿಯ ಜೀವಂಧರ ಕುಮಾರ್, ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಗ್ರಂಥಪಾಲಕಿ ಡಾ.ರಜತಾ, ಜೈನ್‌ಮಿಲನ್ ನಿರ್ದೇಶಕರಾದ ಪ್ರಾಂಶುಪಾಲ ಬಿ.ಪ್ರಮೋದ್ ಕುಮಾರ್ ಮತ್ತು ಬಿ.ಸೋಮಶೇಖರ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಸಂಪತ್ ಕುಮಾರ್ ಸ್ವಾಗತಿಸಿ ವಂದಿಸಿದರು. ಸಾಮೂಹಿಕ ಪಂಚ ನಮಸ್ಕಾರ ಮಂತ್ರ ಪಠಣ, ಸಾಮೂಹಿಕ ಶಾಂತಿಮಂತ್ರ ಪಠಣ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net