

ಮುಳ್ಳೇರಿಯ: ಬಂದಡ್ಕ ಟೌನ್ ಉನ್ನತಿ ಕುಡಿಯುವ ನೀರಿನ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಆರೋಗ್ಯ-ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ, ವಕೀಲೆ ಎಸ್.ಎನ್.ಸರಿತಾ ಉದ್ಘಾಟಿಸಿದರು. ಕುತ್ತಿಕೋಲ್ ಗ್ರಾಪಂ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯ ಬಿ.ಕೃಷ್ಣನ್, ಕುತ್ತಿಕೋಲ್ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕುಂಞ್ಞೆ ರಾಮನ್ ತವನಂ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಪಿ.ವಿ.ಸುರೇಶ್, ಉಮ್ಮರ್, ನೀಲಕಂಠನ್, ಮಹೇಶ್ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಕಾಸರಗೋಡು ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ಕೆ.ಮೋಹನ್ ದಾಸ್ ಸ್ವಾಗತಿಸಿದರು. ಬಂದಡ್ಕ ಟೌನ್ ಉನ್ನತಿ ಪ್ರತಿನಿಧಿ ರಘು ವಂದಿಸಿದರು.