ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಗುರುಗಳು : ದಿನೇಶ್ ಸುವರ್ಣ ರಾಯಿ ಬಣ್ಣನೆ

yuvavahini
ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರು ತತ್ವ ವಾಹಿನಿ ಕಾರ್ಯಕ್ರಮ ನಡೆಯಿತು. ಹರಿಣಾಕ್ಷಿ ನವೀಶ್ ನಾವುರ, ಶಿವಾನಂದ ಎಂ, ನಾಗೇಶ್ ಪೊನ್ನೊಡಿ ಮೊದಲಾದವರಿದ್ದರು.
Published on

ಬಂಟ್ವಾಳ: ಸಮಾಜದ ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕಲು ಹೋರಾಟ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಮಹಾತ್ಮಾ ಗಾಂಧಿ, ರವೀಂದ್ರನಾಥ್ ಠಾಗೋರ್, ಅಂಬೇಡ್ಕರ್ ಮುಂತಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದರು ಎಂದು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಗುರುತತ್ವ ವಾಹಿನಿ(ಮಾಲಿಕೆ 7) ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ಸಂಘಟನಾ ಕಾರ್ಯದರ್ಶಿ ನಿರ್ದೇಶಕಿ ಹರಿಣಾಕ್ಷಿ ನವೀಶ್ ನಾವುರ, ಮಾಜಿ ಅಧ್ಯಕ್ಷರಾದ ಶಿವಾನಂದ ಎಂ., ನಾಗೇಶ್ ಪೊನ್ನೊಡಿ, ಅರುಣ್ ಕುಮಾರ್, ಪ್ರೇಮನಾಥ ಕೆ, ರಾಜೇಶ್ ಸುವರ್ಣ, ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ, ವಿವಿಧ ವಿಭಾಗದ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ವಿಕ್ರಮ್ ಶಾಂತಿ, ಲೋಹಿತ್, ಪುರುಷೋತ್ತಮ ಕಾಯರ್ಪಲ್ಲೆ, ಕೋಶಾಧಿಕಾರಿ ಗೀತಾ ಜಗದೀಶ್, ಸದಸ್ಯರಾದ ಪ್ರಶಾಂತ್ ಏರಮಲೆ, ಚಂದ್ರಶೇಖರ್ ಕಲ್ಯಾಣಾಗ್ರಹಾರ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲಾ, ನಾಗೇಶ್ ಏಲಬೆ, ಜೈದೀಪ್ ಏಲಬೆ, ಹಸ್ತ್ ರಾಯಿ, ಸಾಜಲ್ ರಾಯಿ, ರಾಜೇಶ್ ಬಿ.ಸಿ.ರೋಡ್, ಸುದೀಪ್ ರಾಯಿ ಮತ್ತಿತರರು ಉಪಸ್ಥಿತರಿದ್ದರು.

ನಾರಾಯಣ ಗುರುತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net