ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ : ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಜೈಲಬರಿ ಮಾಹಿತಿ ಡಿ.1ರಂದು ಆಯೋಜನೆ

New Project (5)
Published on

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಬೆಂಗಳೂರು ಸೇರಿ ಮೂವತ್ತೈದು ಟಕಗಳನ್ನು ಹೊಂದಿರುವ ಯುವವಾಹಿನಿ ಕೇಂದ್ರ ಸಮಿತಿ, ಟಕಗಳ ಸದಸ್ಯರಿಗೆ, ಯುವವಾಹಿನಿ ಬೆಳ್ತಂಗಡಿ ಟಕದ ಆತಿಥ್ಯದಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂದ ಸಹಯೋಗದೊಂದಿಗೆ ಡಿ.1ರಂದು ಬೆಳಗ್ಗೆ 8.30ರಿಂದ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಬೆಳ್ತಂಗಡಿಯಲ್ಲಿ ಅಂತರ್ ಟಕ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಜೈಲಬರಿ ಹೇಳಿದರು.

ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ನಂತರ ಸ್ಪರ್ಧೆಗಳು ಪ್ರಾರಂಭವಾಗಲಿವೆ. ಮಧ್ಯಾಹ್ನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ವಾಡಿರುವ ಒಬ್ಬರಿಗೆ ರಂಗ್ ಸವ್ಮಾನ್ ನೀಡಲಾಗುವುದು. ಸಂಜೆ ಸಮಾ ರೋಪ ಸವಾರಂಭ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಯುವವಾಹಿನಿ ಬೆಳ್ತಂಗಡಿ ಟಕ ಅಧ್ಯಕ್ಷ ಸದಾಶಿವ ಊರ, ಡೆನ್ನಾನ ಡೆನ್ನನ ಪ್ರಧಾನ ಸಂಚಾಲಕ ಪ್ರಶಾಂತ್ ಮಚ್ಚಿನ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಡಿ.ಕೆ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ನಿರ್ದೇಶಕ ಹರೀಶ್ ಸುವರ್ಣ ಕನ್ಯಾಡಿ, ಯುವವಾಹಿನಿ ಬೆಳ್ತಂಗಡಿ ಟಕ ವಾಜಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ಯುವವಾಹಿನಿ ಬೆಳ್ತಂಗಡಿ ಟಕ ವಾಜಿ ಅಧ್ಯಕ್ಷ ಅಶ್ವಥ್ ಕುವಾರ್, ಯುವವಾಹಿನಿ ಬೆಳ್ತಂಗಡಿ ಟಕ ಕಾರ್ಯದರ್ಶಿ ಯಶೋಧರ ಮುಂಡಾಜೆ, ಯುವವಾಹಿನಿ ಬೆಳ್ತಂಗಡಿ ಟಕ ನಿರ್ದೇಶಕರಾದ ಚಂದ್ರಹಾಸ ಬಳಂಜ, ಪೃಥ್ವಿರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net