ಡಿ.1ರಂದು ಮಂಡೆಕೋಲಿನಲ್ಲಿ ಅರೆಭಾಷೆ ಗಡಿನಾಡ ಉತ್ಸವ

Published on

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವ ಡಿ.1ರಂದು ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಸಭಾಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ.

ಬೆಳಗ್ಗೆ 9ಕ್ಕೆ ಫಾರೆಸ್ಟ್ ಬಂಗಲೆ ಬಳಿಯಿಂದ ಮೆರವಣಿಗೆ ಹೊರಡುವುದರೊಂದಿಗೆ ಉತ್ಸವ ಆರಂಭಗೊಳ್ಳುತ್ತದೆ. ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಕುಕ್ಕೇಟಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ.

ಅರೆಭಾಷೆ ತ್ರೈಮಾಸಿಕದ ಸಂಯುಕ್ತ ಸಂಚಿಕೆ ಹಿಂಗಾರ ಬಿಡುಗಡೆಗೊಳ್ಳಲಿದೆ. 11ರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. 12ರಿಂದ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳ ಕುರಿತು ಅವಲೋಕನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಂಗೀತಾ ರವಿರಾಜ್ ಹೊಸೂರು, ಲೀಲಾ ದಾಮೋದರ, ಯೋಗಿಶ್ ಹೊಸೊಳಿಕೆ ಹಾಗೂ ಹೇಮಲತಾ ಗಣೇಶ್ ಕಜೆಗದ್ದೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3ರಿಂದ ಸಮಾರೋಪ ನಡೆಯಲಿದೆ. ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತರಿರುತ್ತಾರೆ. ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ದೀಪ ಪ್ರಜ್ವಲನ ಮಾಡಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸನ್ಮಾನ ಕಾರ್ಯ ನೆರವೇರಿಸಲಿದ್ದಾರೆ.

ಅಕಾಡೆಮಿ ಸದಸ್ಯರಾದ ವಿನೋದ್ ಮೂಡಗದ್ದೆ, ಲತಾ ಪ್ರಸಾದ್ ಕುಪ್ಪಾಜೆ, ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಪ್ರಚಾರ ಸಮಿತಿ ಸಂಚಾಲಕ ಜಯರಾಜ್ ಕುಕ್ಕೇಟ್ಟಿ, ಗ್ರಾಮ ಗೌಡ ಸಮಿತಿಯ ಕಾರ್ಯದರ್ಶಿ ದಾಮೋದರ ಮಿತ್ತಪೇರಾಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net