27 ಮಂದಿ ಜತೆಗಿದ್ದರೂ ಗೆಳೆಯನ ಪ್ರಾಣ ಉಳಿಸಿಕೊಳ್ಳಲು ಆಗಿಲ್ಲ; ಬೆಂಗಳೂರಿನಿಂದ ಪ್ರವಾಸಕ್ಕೆ ಹೋದ ವಿದ್ಯಾರ್ಥಿ ಹಾಸನದಲ್ಲಿ ಸಾವು

death
ಸಾಂದರ್ಭಿಕ ಚಿತ್ರ
Published on

ಹಾಸನ: ರಾಜಧಾನಿ ಬೆಂಗಳೂರಿನಿಂದ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಹಾಸನದಲ್ಲಿ ಸಾವಿಗೀಡಾಗಿದ್ದಾನೆ. ಬೆಂಗಳೂರಿನ ಜೆ.ಸಿ.ನಗರದ ನಿವಾಸಿ 18 ವರ್ಷದ ಲಿಂಗರಾಜ್​ ಮೃತಪಟ್ಟ ಯುವಕ.

ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಲಿಂಗರಾಜ್ 27 ಗೆಳೆಯರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಕನಮನೆ ಜಲಪಾತದ ಬಳಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಪ್ರವಾಸಕ್ಕೆ ತೆರಳಿದ್ದ ಎಲ್ಲರೂ ಬೆಂಗಳೂರಿನ ಜೆ.ಸಿ.ನಗರ ಮೂಲದ ವಿದ್ಯಾರ್ಥಿಗಳು. ಜಲಪಾತದಲ್ಲಿ ಸ್ನೇಹಿತರೆಲ್ಲ ಈಜಾಡುತ್ತಿದ್ದಾಗ ದುರಂತ ಸಂಭವಿಸಿದೆ. ಲಿಂಗರಾಜ್​ ಮುಳುಗುತ್ತಿದ್ದರೂ ಜತೆಗಿದ್ದ ಅಷ್ಟೂ ಗೆಳೆಯರು ರಕ್ಷಿಸಲಾಗದೆ ಅಸಹಾಯಕರಾಗುವಂಥ ಪರಿಸ್ಥಿತಿ ಆಗಿತ್ತು.

ಕೊನೆಗೆ ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net