ಬಾಡಿಗೆದಾರನೊಂದಿಗಿನ ಗಲಾಟೆಯಲ್ಲಿ 'ಬಾಡಿ'ಯಾದ ಮನೆ ಮಾಲೀಕ; ತಲೆಗೆ ಪೆಟ್ಟು ಬಿದ್ದು ಸಾವು...

Untitled-1
Published on

ಚಿಕ್ಕಬಳ್ಳಾಪುರ: ಬಾಡಿಗೆದಾರನೊಂದಿಗೆ ನಡೆದ ಗಲಾಟೆಯಲ್ಲಿ ಮನೆ ಮಾಲೀಕನಗೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿನಗರದ ಎನ್​.ಆರ್.ಬಡಾವಣೆ ನಿವಾಸಿ ಶಂಕರಾಚಾರಿ (61) ಸಾವಿಗೀಡಾದ ಮನೆ ಮಾಲೀಕ.

ಶಂಕರಾಚಾರಿಯ ಮನೆಯಲ್ಲಿ ಬಾಡಿಗೆದಾರರಾಗಿರುವ ನಾರಾಯಣಸ್ವಾಮಿ ಮತ್ತು ಅರುಣಾ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿ ಹಾಗೂ ಮನೆ ಮಾಲೀಕರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆಗಿತ್ತು.

ಗಲಾಟೆ ವೇಳೆ ನಡೆದ ನೂಕಾಟದಲ್ಲಿ ಬಿದ್ದ ಮನೆ ಮಾಲೀಕನ ತಲೆಗೆ ಗಂಭೀರವಾಗಿ ಗಾಯ‌ವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದ ಕಾರಣ ಇಂದು ಅವರು ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net