ಪೊಲೀಸ್​ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?

Youth Died
Published on

ಮೈಸೂರು: ಪೊಲೀಸ್​ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ನಗರದ ಸುಣ್ಣದ ಕೇರಿ ನಿವಾಸಿ ಕುಮಾರ್ ಎಂಬುವವರ ಪುತ್ರ ದರ್ಶನ್ (17) ಮೃತ ದುರ್ದೈವಿ. ಕೆ.ಆರ್.ಠಾಣಾ ಪೊಲೀಸರು ಕಿರುಕುಳ ನೀಡಿದ್ದಕ್ಕೆ ದರ್ಶನ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ.

ತಪಾಸಣೆ ವೇಳೆ ಸ್ಕೂಟರ್ ಹಿಂಬದಿಯಲ್ಲಿ ನಂಬರ್ ಪ್ಲೇಟ್ ಇರದಿದ್ದಕ್ಕೆ ಪೊಲೀಸರು ದರ್ಶನ್ ಜತೆಗೆ ಬೈಕ್​ ವಶಕ್ಕೆ ಪಡೆದಿದ್ದರು. ಆತನ ಜತೆಗಿದ್ದ ಸ್ನೇಹಿತ ರವಿ ಎಂಬಾತನನ್ನು ಮನೆಗೆ ಕಳುಹಿಸಿದ್ದರು. ಬಳಿಕ ದರ್ಶನ್​ಗೆ ಪೊಲೀಸರು ಹಿಗ್ಗಾಮಗ್ಗಾ ಥಳಿಸಿದ್ದಾರೆ ಎಂದು ದೂರಲಾಗಿದೆ.

ಅವಮಾನ ಸಹಿಸಲಾಗದೆ ಮನೆಗೆ ಬಂದು ಸ್ನಾನದ ಕೊಠಡಿಯಲ್ಲಿ ದರ್ಶನ್​ ಆತ್ಮಹತ್ಯೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಕೆ.ಆರ್​. ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net