ಜಲಾವೃತವಾಗಿದ್ದ ಪಂಪ್​ಸೆಟ್​ ತರಲು ಹೋದ ಯುವಕನೇ ನಾಪತ್ತೆ..!

Young Man
Published on

ಬಾಗಲಕೋಟೆ: ಮಳೆ ನೀರಿನಿಂದ ಜಲಾವೃತವಾಗಿದ್ದ ಪಂಪ್​ಸೆಟ್​ ತೆಗೆದುಕೊಂಡು ಬರಲು ಹೋಗಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದ್ದು, ಆತನಿಗಾಗಿ ಹುಡುಕಾಟ ಆರಂಭವಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ದೇವಾನಂದ ಕಮ್ಮಾರ (18) ನಾಪತ್ತೆಯಾದ ಯುವಕ. ಹಿರೇಮಳಗಾವಿ ಗ್ರಾಮದ ಮಲಪ್ರಭಾ ನದಿಯಲ್ಲಿ ಈ ಘಟನೆ ನಡೆದಿದೆ. ಈತನಿಗೆ ಸೇರಿದ್ದ ಪಂಪ್​ಸೆಟ್​ ಮಲಪ್ರಭಾ ನದಿ ದಂಡೆಯಲ್ಲಿತ್ತು. ನದಿಯಲ್ಲಿ ಹರಿವು ಹೆಚ್ಚಾದ್ದರಿಂದ ಪಂಪ್​ಸೆಟ್ ಜಲಾವೃತವಾಗಿತ್ತು.

ಪ್ರವಾಹದಿಂದ ಜಲಾವೃತವಾದ ಪಂಪ್​ಸೆಟ್​ ತೆಗೆದುಕೊಂಡು ಬರಲು ಹೋಗಿದ್ದಾಗ ಈತ ಕಾಣೆಯಾಗಿದ್ದಾನೆ. ಈತ ನೀರಿನಲ್ಲಿ ಮುಳುಗಿರಬಹುದು ಎಂಬ ಶಂಕೆಯ ಮೇರೆಗೆ ಇಳಕಲ್ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net