More

    ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

    ಬೆಂಗಳೂರು: ಕೆಲವೇ ನಿಮಿಷಗಳ ಮೊದಲು ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಅವರು ಎರಡು ವಾರಗಳ ಹಿಂದೆ ವಿಜಯವಾಣಿ ಜತೆ ಮಾತನಾಡಿದ್ದರು. ಅಂದು ವಿಜಯವಾಣಿ ಪ್ರತಿನಿಧಿ ಜತೆ ಮಾತನಾಡಿದ್ದ ಅವರು, ‘ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..’ ಎಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವಾಗಿದೆ.

    ವಿಜಯವಾಣಿ ಜತೆ ಮೊನ್ನೆಮೊನ್ನೆಯಷ್ಟೇ ಎಂಬಂತೆ ಉಮೇಶ್​ ಕತ್ತಿ ಅವರು ಮಾತನಾಡಿದ್ದ, ಕೆಲವು ವಿಷಯಗಳು ಇಲ್ಲಿವೆ..

    ಆಗಸ್ಟ್ 23, ಮಧ್ಯಾಹ್ನ 1 ಗಂಟೆ @ವಿಧಾನಸೌಧ

    ವಿಜಯವಾಣಿ: ಮುಂದಿನ ಚುನಾವಣೆಯಲ್ಲಿ ನೀವು ಕ್ಷೇತ್ರ ಬದಲಿಸ್ತೀರಾ? ಹಿರಿಯರು ಬೇರೆ ಕ್ಷೇತ್ರ ನೋಡಿಕೊಳ್ಳಿ ಎಂದು ಪಕ್ಷದ ಸೂಚನೆ ಇದೆಯಲ್ಲ!

    ಉಮೇಶ್ ಕತ್ತಿ: ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್‌ಎ.. ಇನ್ನು 10 ವರ್ಷ ಯಾರೂ ನನ್ನ ಅಲ್ಲಾಡಿಸೋಕೆ ಆಗೋಲ್ಲ. ಯಾವನೂ ನನ್ನ ಸ್ಥಾನ ಕಿತ್ಕೊಳಕೆ ಆಗಲ್ಲ.

    ವಿಜಯವಾಣಿ: ನೀವು ಪದೇಪದೆ ಸಿಎಂ ಆಗ್ತೇನೆ ಅಂತೀರಾ? ನಿಜಕ್ಕೂ ಅಷ್ಟೊಂದು ಆಸೆ ಇದೆಯಾ? ಮುಂದಿನ ಬಾರಿ ಪ್ರಯತ್ನ ಮಾಡ್ತಿರಾ?

    ಉಮೇಶ್ ಕತ್ತಿ: ಬೇಡಪ್ಪಾ ಬೇಡ, ಆ ಸ್ಥಾನ 300 ಡಿಗ್ರಿ ಹೆಂಚಿನ ಮೇಲೆ ಕೂತಂತೆ. ಯಾರಿಗೆ ಬೇಕ್ರಿ? ಈಗ ಆರಾಮ್ ಇದ್ದೇನೆ. ಅಧಿಕಾರದಲ್ಲಿರಬೇಕು, ಸಚಿವನಾಗಿದ್ದೇನೆ, ಸಂತೃಪ್ತ. ನನ್ನ ಉದ್ಯಮದಲ್ಲಿ ಒಳ್ಳೆಯ ಆದಾಯ ಇದೆ, ಅಷ್ಟು ಸಾಕು.

    ವಿಜಯವಾಣಿ: ನೀವು ಮತ್ತೆ ಅಧಿಕಾರಕ್ಕೆ ಬರೋ ವಿಶ್ವಾಸ ಇದೆಯಾ?

    ಉಮೇಶ್ ಕತ್ತಿ: ಡಿಕೆಶಿ ಸಿದ್ದರಾಮಯ್ಯ ಒಟ್ಟಿಗೆ ಹೋದರೆ ನಮಗೆ ಕಷ್ಟ. ಅವರು ಒಟ್ಟಿಗೆ ಹೋಗುವುದು ಅನುಮಾನ. ನಾವೇ ದೊಡ್ಡ ಪಕ್ಷವಾಗಿ ಬರುತ್ತೇವೆ.

    ನಿಮಗೇ ಮೊದಲು ಗುಂಡು ಹಾರಿಸಬೇಕು…

    ಪತ್ರಕರ್ತರು: ರಾಜ್ಯದ ಕೆಲವು ಕಡೆ ಚಿರತೆ ಹಾವಳಿ ಇದೆ, ಇನ್ನು ಕೆಲವು ಕಡೆ ಆನೆ ಹಾವಳಿ ಇದೆಯಲ್ಲ… ಏನು ಮಾಡ್ತಿದೆ ಅರಣ್ಯ ಇಲಾಖೆ?

    ಉಮೇಶ್ ಕತ್ತಿ: ಮೊದಲು‌ ನಿಮಗೆ ಗುಂಡು ಹಾರಿಸಬೇಕು, ಆಗ ಎಲ್ಲ ಸರಿ ಆಗುತ್ತೆ. ನಾವು ಪ್ರಾಣಿಗಳ ಸ್ಥಳ ಆವರಿಸಿಕೊಂಡಿದ್ದೇವೆ. ಅವು ಏನು ಮಾಡ್ತವೆ? ಪತ್ರಕರ್ತರೇ ನೀವೇ ಹೇಳಿ ಏನು ಮಾಡಬೇಕು… ನಾನು ಹಾಗೆ ಮಾಡ್ತಿನಿ.

    'ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..' ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ.. 'ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..' ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ.. 'ಸಾಯೋವರೆಗೂ ಹುಕ್ಕೇರಿಗೆ ನಾನೇ ಎಂಎಲ್​ಎ..' ಎಂದಿದ್ದ ಉಮೇಶ್ ಕತ್ತಿ: ವಿಜಯವಾಣಿಗೆ ನೀಡಿದ್ದ ಕೊನೇ ಸಂದರ್ಶನ..

    ಕತ್ತಿ ತಂದೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು; ಪುತ್ರನೂ ಹೃದಯಾಘಾತಕ್ಕೆ ಬಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts