ನಿಡ್ಲೆಯಲ್ಲಿ ಯಕ್ಷಗಾನ ತಾಳಮದ್ದಳೆ ಕಾರ‌್ಯಕ್ರಮ : ಶ್ರೀ ಉಮಾಮಹೇಶ್ವರ ಯಕ್ಷಕಲಾ ನಿಧಿ ಆಯೋಜನೆ

28
Published on

ಉಪ್ಪಿನಂಗಡಿ: ನಿಡ್ಲೆಯ ಶ್ರೀ ಉಮಾಮಹೇಶ್ವರ ಯಕ್ಷಕಲಾ ನಿಧಿ ಸಂಯೋಜನೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಸಹಯೋಗದೊಂದಿಗೆ ಛಲದಂಕ ಚಕ್ರೇಶ್ವರ ತಾಳಮದ್ದಳೆ ಜರುಗಿತು.

ಭಾಗವತರಾಗಿ ಮಹೇಶ ಕನ್ಯಾಡಿ, ಶಾಲಿನಿ ಹೆಬ್ಬಾರ್, ಹಿಮ್ಮೇಳದಲ್ಲಿ ಮುರಾರಿ ಕಡಂಬಳಿತ್ತಾಯ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ನಿಡ್ಲೆ ಈಶ್ವರ ಪ್ರಸಾದ್ ಪಿ.ವಿ, ರವಿ ಭಟ್ ನೆಲ್ಯಾಡಿ, ದಿವಾಕರ ಆಚಾರ್ಯ ಗೇರುಕಟ್ಟೆ, ಹರೀಶ ಆಚಾರ್ಯ ಬಾರ್ಯ, ಸುಬ್ರಹ್ಮಣ್ಯ ಭಟ್ ಪೆರ್ವೋಡಿ, ಶ್ರುತಿ ವಿಸ್ಮಿತ್, ಅಂಬಾಪ್ರಸಾದ ಪಾತಾಳ, ಶ್ರೀಧರ ಎಸ್‌ಪಿ ಸುರತ್ಕಲ್, ಜಯರಾಮ ನಾಲ್ಗುತ್ತು ಭಾಗವಹಿಸಿದ್ದರು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ವತಿಯಿಂದ ಯಕ್ಷಕಲಾ ನಿಧಿ ಸ್ಥಾಪಕ ಈಶ್ವರ ಪ್ರಸಾದ ಪಿ.ವಿ ಅವರನ್ನು ಸನ್ಮಾನಿಸಲಾಯಿತು. ಹರೀಶ ಆಚಾರ್ಯ ಪುಳಿತ್ತಡಿ, ಪುಷ್ಪಾ ತಿಲಕ್, ಪ್ರದೀಪ ಆಚಾರ್ಯ, ಗಂಗಾಧರ ಉಪಸ್ಥಿತರಿದ್ದರು. ಶ್ರುತಿ ವಿಸ್ಮಿತ್ ಸ್ವಾಗತಿಸಿದರು. ಶ್ರೀಪತಿ ಭಟ್ ವಂದಿಸಿದರು. ಉಮೇಶ್ ಶೆಣೈ, ಬಿ. ಸುಬ್ರಹ್ಮಣ್ಯ ರಾವ್, ರವೀಂದ್ರ ದರ್ಬೆ, ಮಹಾಲಿಂಗೇಶ್ವರ ಭಟ್, ಹರೀಶ್ ಆಚಾರ್ಯ ಬಾರ್ಯ, ಜಯರಾಮ, ಧಾರ್ಮಿಕ ದತ್ತಿ ಇಲಾಖೆ ಪರಿವೀಕ್ಷಕ ಶ್ರೀಧರ ಎಸ್.ಪಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net