ಯಕ್ಷಗಾನ ನಾಟಕ ರಂಗದ ತ್ರಿಂಶತಿ ಸಂಭ್ರಮ

New Project (1)
Published on

ಕಿನ್ನಿಗೋಳಿ: ರಾಜೇಶ್ ತನ್ನ ಮನದ ನೋವು ಮರೆತು ಕಲಾಭಿಮಾನಿಗಳನ್ನು ನಗಿಸಿದವರು. ಕಟೀಲು ದೇವರ ದಯೆಯಿಂದ ಅನಾರೋಗ್ಯದಿಂದ ಮೇಲೆದ್ದು ಮತ್ತೆ ಯಕ್ಷಗಾನ, ನಾಟಕದಲ್ಲಿ ಭಾಗವಹಿಸುವಂತಾಗಿದೆ ಎಂದು ಕಟೀಲು ದೇವಸ್ಥಾನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.

ಯಕ್ಷಗಾನ ನಾಟಕ ಕಲಾವಿದ ರಾಜೇಶ್ ಕೆಂಚನಕೆರೆಯವರ ಯಕ್ಷಗಾನ ನಾಟಕ ರಂಗದ ತ್ರಿಂಶತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕೆ.ಭುವನನಾಭಿರಾಮ ಉಡುಪ, ಉದ್ಯಮಿ ಕುಶಲ ಪೂಜಾರಿ, ಟಿ.ಎಚ್.ಮೈಯದಿ, ದಿವಾಕರ ಕರ್ಕೇರ, ಸುಧಾಕರ ಮೆಸ್ಕಾಂ, ಉಮೇಶ್ ಆಚಾರ್ಯ, ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಜಿ.ಕೆ.ಕೆಂಚನಕೆರೆ, ಉದ್ಯಮಿ ರಘುರಾಮ ಶೆಟ್ಟಿ, ತಾರಾನಾಥ ದೇವಾಡಿಗ, ಪ್ರವೀಣ್ ಆರ್.ಶೆಟ್ಟಿ, ಉಮೇಶ್ ಆಚಾರ್ಯ, ಯೋಗ ಗುರು ಜಯಮುದ್ದು ಶೆಟ್ಟಿ, ದೇವಿದಾಸ್ ಶೆಟ್ಟಿ, ಸಾಯಿನಾಥ ಶೆಟ್ಟಿ, ಲಕ್ಷಣ್ ಬಿ.ಬಿ.ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು. ಶರತ್ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net