

ಮೂಲ್ಕಿ: ಸಮಾಜದ ಹಿತಕ್ಕಾಗಿ ನಿರ್ಮಾಣಗೊಳ್ಳಲಿರುವ ಯೋಜನೆಗೆ ಎಲ್ಲರೂ ಕೈಜೋಡಿಸಿದಲ್ಲಿ ದೈವ ದೇವರ ಆಶೀರ್ವಾದ ಲಭ್ಯವಾಗಲಿದೆ ಎಂದು ದೆಪ್ಪುಣಿಗುತ್ತು ಗುತ್ತಿನಾರ್ ಸುಧಾಕರ ಶೆಟ್ಟಿ ಹೇಳಿದರು.
ಮೂಲ್ಕಿ ಬಂಟರ ಸಂಘದ ವತಿಯಿಂದ ನವೀಕೃತಗೊಂಡು ಪುನಃ ನಿರ್ಮಾಣಗೊಳ್ಳಲಿರುವ ನೂತನ ಭೋಜನ ಶಾಲೆಗೆ ಭಾನುವಾರ ಬೆಳಗ್ಗೆ ಶಿಲಾನ್ಯಾಸ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಕಾರ್ನಾಡು ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಎಚ್.ಅರವಿಂದ ಪೂಂಜ ನೂತನ ಭೋಜನ ಶಾಲೆಗೆ ಶಿಲಾನ್ಯಾಸ ನೆರವೇರಿಸಿದರು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಉಪಾಧ್ಯಕ್ಷ ಜೀವನ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಜತೆ ಕೋಶಾಧಿಕಾರಿ ಶರತ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ರೋಹಿಣಿ ಶೆಟ್ಟಿ, ಮಾಜಿ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ,ಹಿರಿಯರಾದ ಮುರಳಿಧರ ಭಂಡಾರಿ, ಸಂಘದ ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ಮಹಿಮ್ ಹೆಗ್ಡೆ, ಕಿಶೋರ್ ಶೆಟ್ಟಿ, ರಾಜೇಶ್ ಶೆಟ್ಟಿ, ಭಾನುಮತಿ ಶೆಟ್ಟಿ ಕಕ್ವಗುತ್ತು, ರಂಗನಾಥ ಶೆಟ್ಟಿ, ಶ್ರೀಶ ಸರಾಫ್ ಐಕಳ, ದೇವಿಪ್ರಸಾದ್ ಶೆಟ್ಟಿ ಐಕಳ, ಸತೀಶ್ಚಂದ್ರ ಹೆಗ್ಡೆ, ಕೃಷ್ಣ ಶೆಟ್ಟಿ ಕುಬೆವೂರು, ಹರ್ಷರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಆಧಿಧನ್, ಹರೀಶ್ಚಂದ್ರ ಶೆಟ್ಟಿ ಕರ್ನಿರೆ, ಪುಷ್ಪರಾಜ ಚೌಟ, ಪುರುಷೋತ್ತಮ ಶೆಟ್ಟಿ, ದಾಮೋದರ ಶೆಟ್ಟಿ ಕೊಡೆತ್ತೂರು, ದಿನೇಶ್ ಶೆಟ್ಟಿ, ದೇವಿದಾಸ್ ಶೆಟ್ಟಿ ಶ್ರೀ ಕಲ್ಪ, ಪ್ರಸಾದ್ ಶೆಟ್ಟಿ ಕವತ್ತಾರು, ಹರೀಶ್ ಶೆಟ್ಟಿ ತಾಮಣಿಗುತ್ತು, ಸುಧೀರ್ ಶೆಟ್ಟಿ, ಬಬಿತಾ ಶೆಟ್ಟಿ, ನವೀನ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ನಿಶಾಂತ್ ಶೆಟ್ಟಿ ಕಿಲೆಂಜೂರು, ನಾಗರಾಜ್ ಶೆಟ್ಟಿ ಕೊಡೆತ್ತೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಾಯಿನಾಥ್ ಶೆಟ್ಟಿ ನಿರೂಪಿಸಿದರು.