ಉಳ್ಳಾಲ: ಮೆಸ್ಕಾಂ ಕುಂದು ಕೊರತೆ, ಸಲಹೆ ಹಾಗೂ ಸಮಸ್ಯೆ ಚರ್ಚಿಸಲು ಅಸೈಗೋಳಿಯಲ್ಲಿರುವ ಕೊಣಾಜೆ ಉಪವಿಭಾಗ ಕಚೇರಿಯಲ್ಲಿ ಮಂಗಳವಾರ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಿತು.
ಸಭೆಯಲ್ಲಿ ಮೆಸ್ಕಾಂ ಸೇವೆ ಬಗ್ಗೆ ದೂರು ಬರದಿದ್ದರೂ ವೈಯುಕ್ತಿಕ ಸಮಸ್ಯೆಗಳ ಬಗ್ಗೆ ಗ್ರಾಹಕರು ಸಮಸ್ಯೆ ಹೇಳಿಕೊಂಡರು. ಜನಸಂಪರ್ಕ ಸಭೆಯ ಮಾಹಿತಿ ಗ್ರಾಮಸ್ಥರಿಗೆ ಸರಿಯಾಗಿ ತಲುಪಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.
ಮಂಗಳೂರು ಮೆಸ್ಕಾಂ ಅಧೀಕ್ಷಕ ಕೃಷ್ಣರಾಜ್ ಕೆ.ಇ.ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಭಿಯಂತ ರೋಹಿತ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಯಾನಂದ, ಮೆಸ್ಕಾಂ ಸಲಹಾ ಸಮಿತಿ ಕಾರ್ಯಾಧ್ಯಕ್ಷ ಟಿ.ಎಸ್.ಅಬೂಬಕ್ಕರ್, ಸಹಾಯಕ ಅಭಿಯಂತ ರಾಜೇಶ್ ಶೆಟ್ಟಿ, ಮಿಥುನ್ ರಾಜ್, ನಿತೇಶ್ ಹೊಸಗದ್ದೆ, ಶಿವಪ್ರಸಾದ್ ಸಹಾಯಕ ಲೆಕ್ಕಾಧಿಕಾರಿ ಮೆಲ್ವಿನ್, ಕೊಣಾಜೆ ಉಪವಿಭಾಗದ ಪ್ರತಿಭಾ, ಬಾಳೆಪುಣಿ ಗ್ರಾ.ಪಂ.ಸದಸ್ಯ ಶರೀಫ್ ಪಟ್ಟೋರಿ, ನರಿಂಗಾನ ಗ್ರಾ.ಪಂ.ಸದಸ್ಯ ಮುರಳೀಧರ ಶೆಟ್ಟಿ ಮೋರ್ಲ ಮೊದಲಾದವರು ಉಪಸ್ಥಿತರಿದ್ದರು.