ಯುವಜನತೆಯಲ್ಲಿ ಕಲಾ ಪ್ರೌಢಿಮೆ ವೃದ್ಧಿ : ರಾಮಕೃಷ್ಣ ಹೊಳ್ಳಾರು ಅಭಿಮತ

New Project (9)
Published on

ಸುಬ್ರಹ್ಮಣ್ಯ: ಯಕ್ಷಗಾನ ಶಿಕ್ಷಣ ಆಧುನಿಕ ಯುಗದಲ್ಲಿ ಅತ್ಯಗತ್ಯ. ಯುವ ಜನರಲ್ಲಿ ಕಲಾ ಪ್ರೌಢಿಮೆಯ ಔನತ್ಯಕ್ಕೆ ಯಕ್ಷ ಶಿಕ್ಷಣ ಅಡಿಗಲ್ಲಾಗುತ್ತದೆ. ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಎಸ್‌ಎಸ್‌ಪಿಯು ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿರುವ ಉಚಿತ ಯಕ್ಷಗಾನ ನಾಟ್ಯ ತರಗತಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕಿ ಭವ್ಯಶ್ರೀ ಹರೀಶ್ ಕುಲ್ಕುಂದ ಯಕ್ಷಗಾನದ ಹಾಡುಗಳನ್ನು ಹಾಡಿದರು. ಯಕ್ಷ ಗುರು ಸುಂದರ ಅರಸಿನಮಕ್ಕಿ ಯಕ್ಷ ಶಿಕ್ಷಣದ ಕಿರುಪರಿಚಯ ನೀಡಿದರು. ಹಿರಿಯ ಸಹ ಶಿಕ್ಷಕ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ರಘು ಬಿಜೂರು ನಿರೂಪಿಸಿದರು. ಶಿಕ್ಷಕ ಸತೀಶ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸ್ಮಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net