ಪುದು ಗ್ರಾಮಕ್ಕೆ 2.10 ಕೋಟಿ ರೂ. ಅನುದಾನ : ಸ್ಪೀಕರ್ ಯು.ಟಿ.ಖಾದರ್ ಮಾಹಿತಿ

New Project (8)
Published on

ಬಂಟ್ವಾಳ: ಪುದು ಗ್ರಾಮದ ಕುಂಜರ್ಕಳದ ತಡೆಗೋಡೆ, 10ನೇ ಮೈಲುಕಲ್ಲು ಬಳಿ ಬಸ್ ತಂಗುದಾಣ ಹಾಗೂ ತ್ವಾಹಾ ಜುಮಾ ಮಸೀದಿ ಬಳಿ ಅನುಷ್ಠಾನಗೊಂಡ ಹೈಮಾಸ್ಟ್ ದೀಪವನ್ನು ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ನನ್ನನ್ನು ಶಾಸಕನಾಗಿ, ಸಚಿವನಾಗಿ, ಪ್ರತಿಪಕ್ಷ ಉಪನಾಯಕನಾಗಿ ಹಾಗೂ ವಿಧಾನಸಭಾಧ್ಯಕ್ಷನಾಗಿ ಆಯ್ಕೆ ಮಾಡುವಲ್ಲಿ ಪುದು ಗ್ರಾಮಸ್ಥರ ಸಹಕಾರ ವಿಶೇಷವಾಗಿದ್ದು, ಪ್ರಸ್ತುತ ಗ್ರಾಮಕ್ಕೆ 2.10 ಕೋಟಿ ರೂ. ಅನುದಾನ ನೀಡಿ ಶೀಘ್ರ ಅದರ ಕಾಮಗಾರಿಗಳು ಆರಂಭಗೊಳ್ಳಲಿವೆ. 24 ಗಂಟೆಯೂ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಕೊನೆಯ ಹಂತದಲ್ಲಿದೆ ಎಂದರು.

ಸಾಮಾಜಿಕ ಮುಂದಾಳು ಅಬೂಬಕ್ಕರ್ ಕುಂಜತ್ಕಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಇಕ್ಬಾಲ್ ಸುಜೀರು, ಮೊಹಮ್ಮದ್ ಹನೀಫ್, ತ್ವಾಹ ಜುಮಾ ಮಸೀದಿ ಅಧ್ಯಕ್ಷ ಎಸ್.ಹಸನಬ್ಬ, ಧರ್ಮಗುರು ರಹಮಾ ಶಾಫಿ ಕೊಡಗು, ತಾಪಂ ಮಾಜಿ ಸದಸ್ಯ ಇಕ್ಬಾಲ್ ದರ್ಬಾರ್, ಗ್ರಾಪಂ ಸದಸ್ಯರಾದ ಅಬೂಬಕ್ಕರ್ ನಝೀರ್, ಇಶಾಮ್ ಫರಂಗಿಪೇಟೆ, ರಜಾಕ್ ಅಮ್ಮೆಮಾರ್, ಇಕ್ಬಾಲ್ ಪಾಡಿ, ಹನ್ಸ್ ಅಮ್ಮೆಮಾರ್, ಉದ್ಯಮಿ ಅಬ್ದುಲ್ ರಹಿಮಾನ್, ಫಾರೂಕ್, ರಮ್ಲಾನ್, ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ., ಪ್ರಮುಖರಾದ ಮಹಮ್ಮದ್ ಬುಕಾರಿ, ನಜೀರ್ ಎನ್.ಎಂ., ನಿಜಾಮ್, ಶಾಕೀರ್, ಇಸ್ಮಾಯಿಲ್ ಐ.ಕೆ., ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್ ಕುಂಜತ್ಕಳ, ಲತೀಫ್ ಕರ್ಮಾರ್, ಶರೀಫ್, ನಿಶಾರ್, ಖಾಲಿದ್, ಸಫ್ವಾನ್ ಮೊದಲಾದವರಿದ್ದರು. ಕೆ.ಮಹಮ್ಮದ್ ಮುಸ್ತಾಫ ಸ್ವಾಗತಿಸಿದರು. ಇರಾ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net