ಯಕ್ಷಗಾನ ಭಾಗವತೆ ಲೀಲಾವತಿ ಇನ್ನಿಲ್ಲ

Gur_Leelavathi
Published on

ಗುರುಪುರ: ಯಕ್ಷರಂಗದ ಹಿರಿಯ ಭಾಗವತೆ ಕೆ.ಲೀಲಾವತಿ ಬೈಪಡಿತ್ತಾಯ (78) ಅವರು ಬಜ್ಪೆ ಕೊಳಂಬೆ ಹತ್ತಿರದ ತಲಕಳದ ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದ ಶನಿವಾರ ನಿಧನರಾದರು.

ಯಕ್ಷಗಾನ ಮೇಳಗಳಲ್ಲಿ ಭಾಗವತಿಕೆ ಮಾಡಿದ ಹಿರಿಯ ಮಹಿಳಾ ಭಾಗವತರು ಎಂಬ ಪ್ರಸಿದ್ಧಿ ಪಡೆದಿದ್ದರು. 40 ವರ್ಷ ಯಕ್ಷಗಾನ ಮೇಳಗಳಲ್ಲಿ ಭಾಗವತಿಕೆ ನಡೆಸಿದ ಖ್ಯಾತಿ ಇವರದು. 2010ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 2015ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಯಕ್ಷಮಂಗಳ ಪ್ರಶಸ್ತಿ, 2015ರಲ್ಲಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ.

2023ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಕರಾವಳಿ ಲೇಖಕಿ, ವಾಚಕಿಯರ ಸಂಘ ಪ್ರಶಸ್ತಿ, ಉಡುಪಿ ಪೇಜಾವರ ಮಠ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net