ರೈತ ವಿರೋಧಿಗಳು ಸರ್ವನಾಶಕ್ಕೆ ಪ್ರಾರ್ಥನೆ - ದೇವಳ, ಮಸೀದಿ, ಚರ್ಚ್‌ಗಳಿಗೆ ಮೊರೆಹೋದ 400 ಕೆವಿ ಹೋರಾಟಗಾರರು

PTR_14 DEC_1
Published on

ವಿಟ್ಲ: ಉಡುಪಿ-ಕಾಸರಗೋಡು ೪೦೦ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ರೈತ ಹಾಗೂ ಜನವಿರೋಽಯಾಗಿ ವರ್ತಿಸುತ್ತಿರುವವರು ಸರ್ವನಾಶವಾಗಬೇಕೆಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶೋಕಮಾತಾ ಇಗರ್ಜಿ, ಕಂಬಳಬೆಟ್ಟು ಹಜರತ್ ವಲಿಯುಲ್ಲಾಹಿ ದರ್ಗಾ ಶರೀಫ್‌ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ರೈತರಿಗೆ ಸಮಸ್ಯೆಯಾಗುವ ವಿದ್ಯುತ್ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರೂ ಕ್ರಮ ಆಗಿಲ್ಲ. ಮನಃಪರಿವರ್ತನೆಯಾಗಿ ರೈತರ ಪರ ಇರುವಂತೆ ಅನುಗ್ರಹಿಸಬೇಕು. ವಿಟ್ಲ ಸೀಮೆ ಹಾಗೂ ಜಿಲ್ಲೆಗೆ ಮಾರಕವಾದ ಯಾವ ಯೋಜನೆಯೂ ಬರಬಾರದು. ರೈತರ ಮೇಲೆ ನಿರಂತರ ದಬ್ಬಾಳಿಕೆ ಮಾಡುವವರು ಮತ್ತು ಪರಿಸರದ ಮೇಲೆ ದಬ್ಬಾಳಿಕೆ ಮಾಡುವವರು ಮತ್ತು ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿರುವವರ ಅಂತ್ಯವಾಗಲಿ ಎಂದು ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಪ್ರಾರ್ಥಿಸಿದರು. ಅರ್ಚಕ ಕೃಷ್ಣ ಪ್ರಸಾದ್ ಬನ್ನಿಂತಾಯ, ಧರ್ಮಗುರುಗಳಾದ ಐವನ್ ಮೈಕಲ್ ರೋಡ್ರಿಗಸ್, ಅಬೂಬ್ಬಕರ್ ನೇತೃತ್ವದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ರಾಬರ್ಟ್ ಮಂಗಿಲಪದವು, ಶ್ರೀನಿವಾಸ ಮರಡಿತ್ತಾಯ ವನಭೋಜನ, ರಾಜೀವ ಗೌಡ ಬೋಳಿಗದ್ದೆ, ಶಹೀಲ್ ಮಂಗಳಪದವು, ಚಿತ್ತರಂಜನ್ ಎನ್‌ಎಸ್‌ಡಿ, ರೋಹಿತಾಶ್ವ ಭಂಗ, ಅಣ್ಣು ಗೌಡ, ಆನಂದ ಗೌಡ, ತಿಮ್ಮಪ್ಪ ಪೂಜಾರಿ, ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ, ರಾಜೀವ ಕಾಯರ್ಮಾರು, ರವಿ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net