ಒಡ್ಡೂರಿನಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ

Btw_Yakshadhruva
Published on

ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಹಾಗೂ ಪ್ರಾದೇಶಿಕ ಟಕಗಳ ಸಹಯೋಗದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಮತ್ತು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ನೇತೃತ್ವದಲ್ಲಿ ಯಕ್ಷಧ್ರುವ - ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಕಾರ್ಯಕ್ರಮ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ಬುಧವಾರ ಶಾಸಕ ರಾಜೇಶ್ ನಾಕ್ ಮಾಲಕತ್ವದ ಒಡ್ಡೂರು ಫಾರ್ಮ್ಸ್‌ನಲ್ಲಿ ನಡೆಯಿತು.

ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ಶಾಲೆಗಳ ಒಟ್ಟು 900 ವಿದ್ಯಾರ್ಥಿಗಳು ರಂಗಪ್ರವೇಶ ವಾಡಿದ್ದು, ಯಕ್ಷಗಾನ ಪ್ರದರ್ಶನಕ್ಕೆ 2 ಪ್ರತ್ಯೇಕ ರಂಗಸ್ಥಳವನ್ನು ನಿರ್ಮಿಸಲಾಗಿತ್ತು. ಬೆಳಗ್ಗೆ ಚೌಕಿಪೂಜೆ ನಡೆಯಿತು. ಬಳಿಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಡಾ.ವೈ.ಭರತ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ, ಬಂಟ್ವಾಳ ಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ದೇವದಾಸ್ ಶೆಟ್ಟಿ, ಪುರುಷೋತ್ತಮ ಭಂಡಾರಿ ಅಡ್ಯಾರ್, ಜಗನ್ನಾಥ ಶೆಟ್ಟಿ ಬಾಳ, ಪಣಂಬೂರು ವಾಸುದೇವ ಐತಾಳ, ದೀವಿತ್ ಪೆರಾಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

ಕೀರ್ತೀಶೇಷ ಮಿಜಾರುಗುತ್ತು ಆನಂದ ಆಳ್ವ ವೇದಿಕೆಯಲ್ಲಿ ಪೊಳಲಿ, ಕೊಳ್ನಾಡು ಮಂಚಿ, ಮಣಿನಾಲ್ಕೂರು, ಮದ್ವ, ಪುಣ್ಯಕೋಟಿ, ಫರಂಗಿಪೇಟೆ, ಕಲ್ಲಡ್ಕ, ಕೊಲ, ಮುಲ್ಲಕಾಡು, ಪುಂಜಾಲಕಟ್ಟೆ, ಬೈಕಂಪಾಡಿ, ಬೆಂಜನಪದವು, ಸರಪಾಡಿ, ಮೊಗರ್ನಾಡು, ಕಡೇಶಿವಾಲಯ, ಶಂಭೂರು, ನೆಲ್ಲಿತೀರ್ಥ, ಗುರುಪುರ, ಬೋಳಂತೂರು, ಪಂಜಿಕಲ್ಲು, ವಗ್ಗ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net