VIDEO| ರಥೋತ್ಸವದ ವೇಳೆ ಮುರಿದು ಬಿದ್ದ ರಥ..!

Chariot
Published on

ಯಾದಗಿರಿ: ರಥೋತ್ಸವದ ವೇಳೆ ರಥದ ಮೇಲುತುದಿ ಮುರಿದುಬಿದ್ದ ಘಟನೆ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ನಡೆದಿದೆ. ಇದೇ ವೇಳೆ ರಥದ ಚಕ್ರಕ್ಕೆ ವ್ಯಕ್ತಿಯೊಬ್ಬನ ಕಾಲು ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಳಿಚಕ್ರ ಗ್ರಾಮದಲ್ಲಿ ಶನಿವಾರ ಮಲ್ಲಯ್ಯ ದೇವರ ರಥೋತ್ಸವ ನಡೆಯಿತು. ಈ ವೇಳೆ ರಥ ಮೇಲ್ಭಾಗ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗದೇ​ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಗ್ರಾಮಸ್ಥರು ಜಾತ್ರೆ ನಡೆಸಿರುವ ಆರೋಪ ಕೇಳಿಬಂದಿದೆ.

ಸಾವಿರಾರು ಜನರು ಮಲ್ಲಯ್ಯನ ಜಾತ್ರೆ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಉತ್ಸವ ಆಚರಣೆ ಮಾಡಲಾಗಿದೆ. ಅವಗಢದ ವೇಳೆ ವ್ಯಕ್ತಿಯೋರ್ವನ ಕಾಲು ಚಕ್ರದಡಿಗೆ ಸಿಲುಕಿ ನರಳಾಟ ಅನುಭವಿಸಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net