More

    3 ವರ್ಷದಲ್ಲಿ 18 ಬಾಡಿಗೆ ಮನೆ ಬದಲಾವಣೆ: ಪತ್ನಿಯ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಮಾಡಿದ್ದೇನು?

    ಭೋಪಾಲ್​: ಕಳೆದ 3 ವರ್ಷಗಳಲ್ಲಿ 18 ಬಾಡಿಗೆ ಮನೆ ಬದಲಾಯಿಸಿದ ಪತ್ನಿಯ ವರ್ತನೆಯಿಂದಾಗಿ ಬೇಸತ್ತ ವ್ಯಕ್ತಿಯೊಬ್ಬ ಇದೀಗ ಆಕೆಯಿಂದ ಡಿವೋರ್ಸ್​ ಪಡೆಯಲು ಬಯಸಿದ್ದಾನೆ. ಈ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಬೆಳಕಿಗೆ ಬಂದಿದೆ.

    ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಪತಿ ಭೋಪಾಲ್​ ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಪತ್ನಿಗೆ ಜಿರಳೆ ಕಂಡರೆ ವಿಪರೀತ ಭಯ ಎಂಬುದು ಮದುವೆಗು ಮುಂಚೆ ಆತನಿಗೆ ತಿಳಿದಿರಲಿಲ್ಲ. ಆದರೆ, 2017ರಲ್ಲಿ ಮದುವೆಯಾದ ಬಳಿಕ ಆತನಿಗೆ ಪತ್ನಿಯ ಬಗ್ಗೆ ತಿಳಿದಿದೆ. ಮನೆಯಲ್ಲಿ ಜಿರಳೆ ಕಂಡರೆ ಸಾಕು ಆಕೆ ಬೆದರಿ ಬೆಂಡಾಗುತ್ತಿದ್ದಳು. ಈ ಕಾರಣದಿಂದಲೇ ಆಕೆ ಅಡುಗೆ ಮನೆಯತ್ತ ತಲೆ ಹಾಕಿಯು ಮಲಗುತ್ತಿರಲಿಲ್ಲ.

    ಹೀಗಾಗಿ ಜಿರಳೆ ಇಲ್ಲದ ಮನೆ ಮಾಡುವಂತೆ ಗಂಡನಿಗೆ ಒತ್ತಾಯ ಮಾಡಿದ್ದಾಳೆ. 2018ರಲ್ಲಿ ಆರಂಭವಾದ ಮನೆ ಹುಡುಕಾಟದ ಕೆಲಸ ಬರೋಬ್ಬರಿ 3 ವರ್ಷಗಳಲ್ಲಿ 18 ಮನೆಯನ್ನು ಬದಲಾಯಿಸಿದ್ದಾರೆ. ಅವರು ಹೋದ ಮನೆಯಲೆಲ್ಲಾ ಅವರಿಗೆ ಜಿರಳೆಯೇ ಸುಸ್ವಾಗತ ಮಾಡಿದೆ.

    ಇದನ್ನೂ ಓದಿರಿ: ಕುಂಭಮೇಳ ಯಾತ್ರಿಗಳಿಗೆ 14 ದಿನಗಳ ಕ್ವಾರಂಟೈನ್​ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ

    ಇದು ಸರಿಹೋಗಲ್ಲ. ಪತ್ನಿಯನ್ನು ಸರಿದಾರಿಗೆ ತರಬೇಕೆಂದುಕೊಂಡ ಪತಿ ಸಾಕಷ್ಟು ಮನೋವೈದ್ಯರು ಹಾಗೂ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವುದೂ ಪ್ರಯೋಜನ ಆಗಲಿಲ್ಲ. ಸಾಕಷ್ಟು ಆಪ್ತ ಸಮಾಲೋಚನೆಯನ್ನು ಕೊಡಿಸಿದ್ದರು ಆಕೆಯ ಮನಸ್ಸಿನಲ್ಲಿ ಆವರಿಸಿದ ಜಿರಳೆ ಭಯ ಮಾತ್ರ ಕಡಿಮೆ ಆಗಲೇ ಇಲ್ಲ. ಸಾಕಷ್ಟು ಪ್ರಯತ್ನಗಳನ್ನು ಮಾಡಿ ಯಾವುದೂ ಫಲ ಕೊಡದಿದ್ದಾಗ ರೋಸಿ ಹೋಗಿರುವ ಗಂಡ ಇದೀಗ ಡಿವೋರ್ಸ್​ ಪಡೆದುಕೊಳ್ಳಲು ಎದುರು ನೋಡುತ್ತಿದ್ದಾನೆ.

    ಅಂದಹಾಗೆ ಜಿರಳೆ ನೋಡಿ ತುಂಬಾ ಭಯ ಬೀಳುವುದನ್ನು ಕತ್ಸರಿಡಾಫೋಬಿಯಾ ಎಂದು ಕರೆಯಲಾಗುತ್ತದೆ. ಕಟ್ಸರಿಡಾಫೋಬಿಯಾದಂತಹ ಕಾಯಿಲೆಗಳಿಗೆ ಸಾಮಾನ್ಯವಾಗಿ ಅರಿವಿನ ವರ್ತನೆಯ ಚಿಕಿತ್ಸೆಯನ್ನು ಬಳಸಿಕೊಂಡು ಕ್ರಮೇಣ ಡಿಸೆಂಟೈಸೇಶನ್ ವಿಧಾನ ಅಥವಾ ಮಾನ್ಯತೆ ವಿಧಾನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. (ಏಜೆನ್ಸೀಸ್​)

    ಹಣಕ್ಕಾಗಿ ಅಡ್ಡದಾರಿ; ಹಾಳಾಯ್ತು ವೈಯಕ್ತಿಕ ಮತ್ತು ವೈವಾಹಿಕ ಜೀವನ

    ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್‌ ಪರಿಹಾರ ಹೇಳಿ

    ಹೃದಯದ ಚಿಕಿತ್ಸೆಗೂ, ಕಿವುಡುತನಕ್ಕೂ ಸಂಬಂಧವಿದೆಯಾ? ಮಾನಸಿಕ ಹಿಂಸೆಯಾಗಿದೆ… ಪರಿಹಾರ ಹೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts