ಅಂಗನವಾಡಿ ಸಹಾಯಕಿಯನ್ನು ರಾತ್ರೋರಾತ್ರಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾದ ಸಂಬಂಧಿಕರು!

Kidnap
Published on

ಯಾದಗಿರಿ: ಕೇಸು ದಾಖಲಾಗುತ್ತಿದ್ದಂತೆ ಅಪಹರಣಕಾರರು ಅಂಗನವಾಡಿ ಸಹಾಯಕಿಯನ್ನು ರಾತ್ರೋ ರಾತ್ರಿ ಊರಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ ಆಗಿರುವ ಸುರಪುರ ತಾಲೂಕಿನ ಹೆಗ್ಗಣ್ಣದೊಡ್ಡಿಯಲ್ಲಿ ನಿನ್ನೆ ನಡೆದಿದೆ.

ಆಸ್ತಿ ವಿಚಾರವಾಗಿ ಸಹೋದರನಿಂದಲೇ ಸಹೋದರಿ ಅಂಗನವಾಡಿ ಸಹಾಯಕಿ ಮಲ್ಲಮ್ಮಳನ್ನು ಅಪಹರಿಸಿ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪ ಕೇಳಿಬಂದಿದೆ.

ಶುಕ್ರವಾರ ಕೋವಿಡ್ ಜಾಗೃತಿ ಮೂಡಿಸುವ ಕರ್ತವ್ಯದಲ್ಲಿರುವಾಗಲೇ ಮಲ್ಲಮ್ಮಳನ್ನು ಅಪಹರಣ ಮಾಡಲಾಗಿತ್ತು. ಸಹೋದರ ಬಸವರಾಜು ಹಾಗೂ ಆತನ ಮಕ್ಕಳು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.

ಇತ್ತ ಕಿಡ್ನಾಪ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್​ಪಿ ವೇದಮೂರ್ತಿ ಸ್ಥಳಕ್ಕೆ ಭೇಟಿ ಪೊಲೀಸರ ಕಟ್ಟೆಚ್ಚೆರ ವಹಿಸಿದ್ದರು. ಈ ಬಗ್ಗೆ ಕೆಂಭಾವಿ ಪೊಲೀಸ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೆವೆಂಬ ಭಯದಲ್ಲಿ ಶುಕ್ರವಾರ ರಾತ್ರಿಯೇ ಕೊರೊನಾ ವಾರಿಯರ್ಸ್‌ ಮಲ್ಲಮ್ಮಳನ್ನು ಊರ ಹೊರಗಿನ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಪೊಲೀಸರ ಕಟ್ಟೆಚ್ಚೆರದಿಂದ ಕಿಡ್ನಾಪ್ ಆಗಿದ್ದ ಕೊರೊನಾ ವಾರಿಯರ್ಸ್‌ ಮಲ್ಲಮ್ಮ ಬಚಾವ್ ಆಗಿದ್ದಾರೆ. ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net