ಮತ್ತೆ ಶುರುವಾಗುತ್ತಾ ಬಿಗ್​ಬಾಸ್​ ಸೀಸನ್​ 8? ಕಿಚ್ಚನ ಆ ಒಂದು ಮಾತು ನಿಜವಾಗಲಿದೆಯೇ?

BBK8
Published on

ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯ ತೀವ್ರತೆಯಿಂದಾಗಿ ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಕರೊನಾದಿಂದ ಕಾರ್ಯಕ್ರಮವನ್ನು ನೆಡೆಸುವುದೇ ಒಂದು ಸವಾಲಾಗಿತ್ತು. ಕೊನೆಯ ಮೂರು ವಾರಗಳಲ್ಲಿ ಟಿಆರ್​ಪಿ ರೇಟಿಂಗ್​ ಸಹ ಕುಸಿದಿತ್ತು. ಕೊನೆಗೂ ಕಾರ್ಯಕ್ರಮಕ್ಕೆ ಕಲರ್ಸ್​ ಕನ್ನಡ ಪೂರ್ಣವಿರಾಮ ಹಾಕಿದೆ.

ಕೊನೆಯ ಎಪಿಸೋಡ್​ ಅಂತೂ ಬಿಗ್​ಬಾಸ್​ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ವಿಡಿಯೋ ಕಾಲ್​ ಮೂಲಕ ಕೊನೆಯ ಎಪಿಸೋಡ್​ ಅನ್ನು ಹೋಸ್ಟ್​ ಮಾಡಿದ ಸುದೀಪ್, ಕಲರ್ಸ್​ ಕನ್ನಡ ಮತ್ತು ವೀಕ್ಷಕರಿಗೆ ಧನ್ಯವಾದ ಹೇಳಿದರು. ಪ್ರದರ್ಶನವನ್ನು ಸ್ಥಗಿತಗೊಳಿಸಿದ ಬಗ್ಗೆ ನಿರಾಶೆಗೊಳ್ಳಬೇಡಿ ಎಂದು ಸುದೀಪ್ ಸ್ಪರ್ಧಿಗಳಿಗೆ ಹೇಳಿದರು ಮತ್ತು ಭವಿಷ್ಯದಲ್ಲಿ ತಯಾರಕರು ಸ್ವಲ್ಪ ಆಶ್ಚರ್ಯವನ್ನುಂಟು ಮಾಡಲಿದ್ದಾರೆಂದು ಭರವಸೆ ಸಹ ನೀಡಿದರು.

ಸುದೀಪ್​ ಹೇಳಿಕೆ ಬೆನ್ನಲ್ಲೇ ಕರೊನಾ ನಿಯಂತ್ರಣಕ್ಕೆ ಬಂದ ಬಳಿಕ ಮತ್ತೆ ಬಿಗ್​ಬಾಸ್ ಶೋ ಕಿರುತೆರೆಯ ಮೇಲೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಖಂಡಿತವಾಗಿ ಕಾರ್ಯಕ್ರಮ ಮರು ಆರಂಭವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.

ಇನ್ನು ಕೆಲ ನೆಟ್ಟಿಗರು ಜಾಲತಾಣದಲ್ಲಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡಿ, ಅದೇ ಆಟಗಾರರೊಂದಿಗೆ ಪ್ರದರ್ಶನವನ್ನು ಪುನರಾರಂಭಿಸದಂತೆ ಕೇಳಿಕೊಳ್ಳುತ್ತಿದ್ದಾರೆ. ಹೀಗಿದ್ದ ಆಟಗಾರರು ಮನರಂಜನೆ ನೀಡಲು ಹಿಂದುಳಿದಿದ್ದರು. ಹೀಗಾಗಿ ಹೊಸ ಸ್ಪರ್ಧಿಗಳೊಂದಿಗೆ ಹೊಸ ಆವೃತ್ತಿಯನ್ನೇ ಆರಂಭಿಸಿ ಎಂದು ತಯಾರಕರನ್ನು ಒತ್ತಾಯಿಸುತ್ತಿದ್ದಾರೆ.

ಕಿಚ್ಚನ ಸುಳಿವಿನಂತೆಯೇ ಬಿಗ್​ಬಾಸ್​ ಮತ್ತೆ ಪ್ರಾರಂಭವಾಗಲಿದೆಯೇ? ಅಥವಾ ಶೋ ಇಲ್ಲಿಗೆ ಮುಕ್ತಾಯವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net