ರಾಯರನ್ನು ಆರಾಧಿಸಿ ಪುನೀತರಾಗಿ

BYN-May29-2-Raghavendra Mutt
Published on

ಬೈಂದೂರು: ಮದ್ವಾಚಾರ್ಯರು ತೋರಿದ ದಾರಿಯಲ್ಲಿ ಭಗವಂತನ ಆರಾಧನೆ ವಾಡಿ ಅದರಿಂದ ಸಿಗಬಹುದಾದ ಭಾಗ್ಯ ಯಾವುದು ಎಂಬುವುದಕ್ಕೆ ರಾವೇಂದ್ರ ಸ್ವಾಮಿಗಳು ಸಾಕ್ಷಿಯಾಗಿದ್ದಾರೆ. ಇಂತಹ ಸಾಧನೆ ವಾಡಿದ ರಾಯರನ್ನು ನಾವು ಗುರುಗಳಾಗಿ ಸ್ವೀಕರಿಸಿ ಆರಾಧಿಸಿ ಪುನೀತರಾಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ವತ್ತಿನೆಣೆ ಶ್ರೀ ಗುರು ರಾವೇಂದ್ರ ಸ್ವಾಮಿ ಮಠದ (ಕಿರು ಮಂತ್ರಾಲಯ) ಶ್ರೀ ಗುರು ಸಾರ್ವಭೌಮರ ವೃಂದಾವನ ಪುನಃಪ್ರತಿಷ್ಠಾಪನೆ, ಶ್ರೀ ಆಂಜನೇಯ, ನವಗ್ರಹ ಕಲಶಾಭಿಷೇಕ, ಶತಕಲಶ ಸಹಿತ ಬ್ರಹ್ಮಕಲಶೋತ್ಸವ ಹಾಗೂ ವೃಂದಾವನ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದರು.

ಪುತ್ತಿಗೆ ಮಠದ ಸಂಸ್ಥಾನ ವಿದ್ವಾಂಸ ಕುತ್ಯಾರು ಕೇಂಜಿ ಶ್ರೀಧರ ತಂತ್ರಿ, ಶ್ರೀ ಸೇನೇಶ್ವರ ದೇವಸ್ಥಾನ ಅರ್ಚಕ ಯು.ಮಂಜುನಾಥ ಮಯ್ಯ, ಮಹಾಸತಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ, ಕ್ಷೇತ್ರದ ಅರ್ಚಕ ಸುಬ್ರಾಯ ನಾವಡ, ಸ್ವಾಗತ ಸಮಿತಿ ಸಂಚಾಲಕ ಎಸ್.ನಾಗಯ್ಯ ಶೆಟ್ಟಿ ಹೊಸ್ಮನೆ ಉಪಸ್ಥಿತರಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಉದ್ಘಾಟಿಸಿದರು. ರಾವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕೆನರಾ ಬ್ಯಾಂಕ್ ಅಧಿಕಾರಿ ಸತೀಶ್ ಶೆಟ್ಟಿ, ಸಹಾಯಕ ಮಹಾಪ್ರಬಂಧಕ ತಡಿನಾಡ ನಾಗಪೂರ್ಣಾನಂದ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ಯು.ರಾಜೇಶ ಕಾರಂತ್, ಉದ್ಯಮಿ ಆನಂದ ಶೆಟ್ಟಿ ನಾಕಟ್ಟೆ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ.ಪಡುವರಿ, ನಾಗರಾಜ ಗಾಣಿಗ ಬಂಕೇಶ್ವರ, ಶಿರೂರು ಮಂಡಲ ಪಂಚಾಯಿತಿ ವಾಜಿ ಪ್ರಧಾನ ನಾರಾಯಣ ಅಳ್ವೆಗದ್ದೆ, ಶ್ರೀ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಯಡ್ತರೆ, ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಈಶ್ವರ ವಾರಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ವಸಂತ ಕುವಾರ್ ಶೆಟ್ಟಿ, ಉದ್ಯಮಿ ಅರವಿಂದ ಪೂಜಾರಿ ಪಡುಕೋಣೆ, ಪಂಚಲಿಂಗೇಶ್ವರಿ ದೇವಸ್ಥಾನ ಅಧ್ಯಕ್ಷ ರುರಾಮ ಶೆಟ್ಟಿ, ಸೀತಾರಾಮಚಂದ್ರ ದೇವಸ್ಥಾನ ಅಧ್ಯಕ್ಷ ರಾಮಕೃಷ ್ಣ ಸಿ., ಚಿತ್ತೇರಿ ದೇವಸ್ಥಾನ ಅಧ್ಯಕ್ಷ ಶಿವರಾಮ ಎನ್. ಶೆಟ್ಟಿ, ಹೇನಬೇರು ಗಣಪತಿ ದೇವಸ್ಥಾನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ಅಧ್ಯಕ್ಷ ವೆಂಕಟ್ರಮಣ ಖಾರ್ವಿ, ವಲಯ ನಾಡದೋಣಿ ಮೀನುಗಾರರ ಸಂ ಅಧ್ಯಕ್ಷ ನಾಗೇಶ ಖಾರ್ವಿ ಉಪಸ್ಥಿತರಿದ್ದರು.

ರಾವೇಂದ್ರ ಸ್ವಾಮಿ ಟ್ರಸ್ಟ್ ಉಪಾಧ್ಯಕ್ಷ ಎಸ್.ರಾಜು ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಸ್ವಾಗತಿಸಿದರು. ಕೆ.ಪ್ರದೀಪ್ ಶೆಟ್ಟಿ ವಂದಿಸಿದರು. ಸುಧಾಕರ ಪಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net