

ಕುಂದಾಪುರ: ಧರ್ವಾಧ್ಯಕ್ಷರ ಹುದ್ದೆ ಎನ್ನುವುದು ಹೂವಿನ ಹಾಸಿಗೆಯಲ್ಲ ಬದಲಾಗಿ ಅದು ದೇವರೇ ದಯಪಾಲಿಸಿದ ಮಹತ್ತರವಾದ ಜವಾಬ್ದಾರಿ. ಯೇಸು ಸ್ವಾಮಿ ಹೊತ್ತೊಯ್ದ ಪವಿತ್ರ ಶಿಲುಬೆಯನ್ನು ತನ್ನ ಧರ್ಮಪ್ರಾಂತ್ಯದ ಅಧೀನದಲ್ಲಿರುವ ಭಕ್ತರೊಂದಿಗೆ ಹೊತ್ತೊಯ್ದು ಉತ್ತಮ ವಾರ್ಗದರ್ಶನ ನೀಡುವ ವಿಶೇಷ ಜವಾಬ್ದಾರಿ ಧರ್ವಾಧ್ಯಕ್ಷರದ್ದಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ವಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ರಾಜಸ್ಥಾನದ ಆಜ್ಮೀರ್ ಧರ್ಮಪ್ರಾಂತ್ಯದ ನೂತನ ಧರ್ವಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕುಂದಾಪುರ ತಾಲೂಕಿನ ಬಸ್ರೂರು ಸಂತ ಫಿಲಿಪ್ ನೆರಿ ಧರ್ಮ ಕೇಂದ್ರದ ಜೋನ್ ಕರ್ವಾಲ್ಲೊ ಅವರನ್ನು ಹುಟ್ಟೂರಿನಲ್ಲಿ ಸನ್ಮಾನಿಸಿ ಮಾತನಾಡಿದರು.
ಉಡುಪಿ ಧರ್ಮಪ್ರಾಂತ್ಯ ಧರ್ವಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ವಾಧ್ಯಕ್ಷ ಹೆನ್ರಿ ಡಿಸೋಜ, ಜೈಪುರ್ ಧರ್ಮಪ್ರಾಂತ್ಯದ ನಿವೃತ್ತ ಧರ್ವಾಧ್ಯಕ್ಷ ಓಸ್ವಲ್ಡ್ ಜೆ.ಲೂವಿಸ್, ಕಾರವಾರ ಧರ್ವಾಧ್ಯಕ್ಷ ದುಮಿಂಗ್ ಡಯಾಸ್, ಹಲವಾರು ಧರ್ಮಗುರುಗಳು, ಧರ್ಮ ಭಗಿನಿಯರು ಕೃತಜ್ಞತಾ ಬಲಿಪೂಜೆ ಸಲ್ಲಿಸಿದರು.
ನೂತನ ಧರ್ವಾಧ್ಯಕ್ಷ ಜೋನ್ ಕರ್ವಾಲ್ಲೊ ಅವರಿಗೆ ಬಸ್ರೂರು ಸಂತ ಫಿಲಿಪ್ ನೆರಿ ಧರ್ಮಕೇಂದ್ರದ ವತಿಯಿಂದ, ಧರ್ವಾಧ್ಯಕ್ಷರು ಕಲಿತ ನಿವೇದಿತಾ ಶಾಲೆಯ ಅಧ್ಯಾಪಕ ವಂದದವರಿಂದ ಗೌರವ ಸಲ್ಲಿಸಲಾಯಿತು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ಪಾವ್ಲ್ ರೇಗೊ, ಆಜ್ಮೀರ್ ಧರ್ಮಪ್ರಾಂತ್ಯದ ಧರ್ಮಗುರುಗಳ ಪ್ರತಿನಿಧಿ ಕ್ಲೇಮಂಟ್ ಕುಟಿನ್ಹೊ, ಬೆಥನಿ ಸಂಸ್ಥೆಯ ಮದರ್ ಜನರ್ ಸಿಸ್ಟರ್ ರೋಸ್ ಸೆಲಿನ್, ವಾರ್ಗರೇಟ್ ಕರ್ವಾಲ್ಲೊ, ಸಿಸ್ಟರ್ ಪ್ರೇವಾ ಕರ್ವಾಲ್ಲೊ, ಬಸ್ರೂರು ಫಿಲಿಪ್ ನೆರಿ ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷೆ ಜಸಿಂತಾ ಮೆಂಡೊನ್ಸಾ ಉಪಸ್ಥಿತರಿದ್ದರು. ಧರ್ಮಗುರು ರೋಯ್ ಲೋಬೊ ಸ್ವಾಗತಿಸಿದರು. ಆಯೋಗಗಳ ಸಂಚಾಲಕ ಲೊರೇನ್ಸ್ ಬಾರೆಟ್ಟೊ ವಂದಿಸಿದರು. ಅಶ್ವಿನ್ ಆರಾನ್ಹಾ ನಿರೂಪಿಸಿದರು.