ಚರಂಡಿ ಇದ್ದರೂ ಕೃತಕ ನೆರೆ ಭೀತಿ

charandi samasye
ನೀರು ಹರಿದು ಹೋಗುವ ಸರಿಯಾದ ವ್ಯವಸ್ಥೆಯಿಲ್ಲದೆ ಚರಂಡಿಯಲ್ಲಿ ತುಂಬಿರುವುದು.
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಮಳೆ ನೀರು ಸರಾಗವಾಗಿ ಹರಿದು ಹೋಗಲು ಇದ್ದ ತೋಡು ಹಾಗೂ ಚರಂಡಿಗಳು ವಾಯವಾಗಿದ್ದು ಪರಪು ಗುಡ್ಡೆ ಪರಿಸರದ ಜನವಸತಿ ಪ್ರದೇಶದಲ್ಲಿ ಕೃತಕ ನೆರೆ ನೀರಿನ ಆತಂಕ ಎದುರಾಗಿದೆ.

ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡ್ಯಡ್ಕದಿಂದ ಪರಪು ಹಾಗೂ ತಾಲೂಕು ಕಚೇರಿಗೆ ಸಾಗುವ ಮಧ್ಯದಲ್ಲಿರುವ ಪರಪು ಗುಡ್ಡೆ ಎಂಬಲ್ಲಿ ಸುವಾರು 60ಕ್ಕೂ ಅಧಿಕ ಮನೆಗಳಿವೆ. ಇಲ್ಲಿ ಚರಂಡಿ ಸೌಲಭ್ಯವಿದ್ದರೂ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳಿಲ್ಲದೆ ನೀರು ಕಾಂಕ್ರೀಟ್ ಚರಂಡಿಯಲ್ಲೇ ಶೇಖರಣೆಯಾಗುತ್ತಿದೆ. ಹೀಗಾಗಿ ಪರಿಸರದಲ್ಲಿ ಕೊಳಚೆ ನೀರಿನಿಂದ ಗಬ್ಬೆದ್ದು ನಾರುವ ಸ್ಥಿತಿಯೊಂದೆಡೆಯಾದರೇ ಮತ್ತೊಂದೆಡೆ ಸೊಳ್ಳೆ ಉತ್ಪತ್ತಿ ತಾಣವಾಗುವ ಆತಂಕ ಕಾಡುತ್ತಿದೆ.

ಎತ್ತರದ ಗುಡ್ಡ ಪರಿಸರದಿಂದ ಹರಿದು ಬರುವ ನೀರು ನೇರವಾಗಿ ಚರಂಡಿ ಸೇರಿ ಬಳಿಕ ಸಮೀಪದಲ್ಲಿದ್ದ ತೋಡಿನ ಮೂಲಕ ಹಾದು ಹೋಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ಮನೆಗಳ ನಿರ್ವಾಣದಿಂದ ನೀರು ಹರಿಯಲು ಇದ್ದ ತೋಡುಗಳು ವಾಯವಾಗಿವೆ. ನೀರು ಹರಿದು ಹೋಗಲು ವ್ಯವಸ್ಥೆಗಳಿಲ್ಲದೆ ಚರಂಡಿ ಹಾಗೂ ಮನೆ ಪರಿಸರದಲ್ಲೇ ಶೇಖರಣೆೆಯಾಗುವಂತಾಗಿದೆ.

ಚರಂಡಿಯಲ್ಲಿ ಮಣ್ಣು ಶೇಖರಣೆ: ಗ್ರಾಮ ಪಂಚಾಯಿತಿ ಇಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿದ್ದರೂ ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಭಾರಿ ಮಳೆ ಬಂದಾಗ ಕೃತಕ ನೆರೆ ನಿರ್ಮಾಣದ ಆತಂಕ ಎದುರಾಗಿದ್ದು, ಜನರು ಪರದಾಡುವಂತಾಗಿದೆ.

ವಾಹನ ಸವಾರರಿಗೂ ತೊಂದರೆ: ಗುಂಡ್ಯಡ್ಕದಿಂದ ಪರಪು ವಾರ್ಗವಾಗಿ ತಾಲೂಕು ಕಚೇರಿ ಸಂಪರ್ಕಿಸಲು ನಿತ್ಯ ನೂರಾರು ಮಂದಿ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ರಸ್ತೆ ತುಂಬೆಲ್ಲ ನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ. ಇನ್ನು ಪಾದಚಾರಿಗಳ ಗೋಳನ್ನಂತು ಕೇಳುವುದೇ ಬೇಡ. ಸಂಬಂಧಪಟ್ಟ ಅಧಿಕಾರಿಗಳು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂದು ಪರಿಸರದ ನಿವಾಸಿಗಳು ಆಗ್ರಹಿಸಿದ್ದಾರೆ.

ಮಳೆ ಬಂದರೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ ರಸ್ತೆ ತುಂಬೆಲ್ಲ ನೀರು ನಿಲ್ಲುವಂತಾಗಿದೆ. ಅಲ್ಲದೆ ಸಮೀಪದಲ್ಲಿದ್ದ ತೋಡುಗಳು ಒತ್ತುವರಿಯಾಗಿ ನೀರು ಹರಿಯಲು ಜಾಗವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಕೃತಕ ನೆರೆ ಉಂಟಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸಂತೋಷ್, ವಾಹನ ಸವಾರ. https://www.vijayavani.net/operation-footpath-in-saligrama https://www.vijayavani.net/humiliation-and-defeat-are-stepping-stones-to-success

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net