

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮತ್ತು ಮತ್ತು ಶೌರ್ಯ ವಿಪತ್ತು ಘಟಕದ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನಾದ್ಯಂತ 5 ಸಾವಿರ ಹಣ್ಣಿನ ಹಾಗೂ ಅರಣ್ಯ ಗಿಡಗಳ ನಾಟಿಗೆ ಚಾಲನೆ ನೀಡಲಾಯಿತು.
ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ಹಣ್ಣಿನ ಗಿಡವನ್ನು ನಾಟಿ ಮಾಡುವ ಮೂಲಕ, ತಾಲೂಕಿನಾದ್ಯಂತ 5000 ಹಣ್ಣಿನ ಹಾಗೂ ಅರಣ್ಯ ಗಿಡಗಳ ನಾಟಿಗೆ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಚಾಲನೆ ನೀಡಿ ಮಾತನಾಡಿ, ನಮ್ಮ ಮನೆ ಪರಿಸರದಲ್ಲಿ ಗಿಡಗಳನ್ನು ನಾಟಿ ಮಾಡಿ ಅವುಗಳನ್ನು ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ನಮ್ಮ ಪರಿಸರ ಉಳಿಯುತ್ತದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಯೋಜನೆಯ ಒಕ್ಕೂಟ ಇತರ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪರಿಸರ ಕಾರ್ಯಕ್ರಮ ನಡೆಸಲು ಪ್ರೇರಣೆ ನೀಡುತ್ತಿದ್ದಾರೆ ಎಂದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಬೆಳ್ತಂಗಡಿ, ಒಕ್ಕೂಟದ ಅಧ್ಯಕ್ಷ ಚರಣ್ ಕುಮಾರ್, ಉಪಾಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಅಕ್ಷತಾ, ಬೆಳ್ತಂಗಡಿ ಬಿ.ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ತಾಲೂಕಿನ ಕೃಷಿ ಅಧಿಕಾರಿ ರಾಮ್‌ಕುಮಾರ್, ಮೇಲ್ವಿಚಾರಕ ಹರೀಶ್, ಸೇವಾಪ್ರತಿನಿಧಿ ಜ್ಯೋತಿ ಹಾಗೂ ಶಾಲಾ ಶಿಕ್ಷಕವೃಂದ, ಪೃಥ್ವಿ ಜ್ಯುವೆಲ್ಲರ್ಸ್ ಮುಖ್ಯಸ್ಥರು. ಪೃಥ್ವಿ ಜ್ಯುವೆಲ್ಲರ್ಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಸೂರ್ಯನಾರಾಯಣ ಸ್ವಾಗತಿಸಿ, ಶಾಲಾ-ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೀನಕುಮಾರು ವಂದಿಸಿದರು.