ಸುಳ್ಯ: ಪರಿಸರ ನಾಶದಿಂದ ಜೀವ ಸಂಕುಲಗಳು ಅಪಾಯಗಳನ್ನು ಎದುರಿಸುತ್ತಿದ್ದು ಪ್ರಾಕೃತಿಕ ವಿಕೋಪಗಳಿಂದಾಗಿ ಉತ್ತಮ ಬದುಕಿಗಾಗಿ ಹೋರಾಡಬೇಕಾದ ಅನಿರ್ವಾಯತೆ ಇದೆ ಎಂದು ಕೆವಿಜಿ ಕಾನೂನು ಕಾಲೇಜಿನ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಹೇಳಿದರು.
ನಗರದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಆಚರಿಸಲಾದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮೃದ್ಧ ಪರಿಸರವನ್ನು ಸುಂದರ ನಾಳೆಗಳಿಗಾಗಿ ರಕ್ಷಿಸುವ, ಬೆಳೆಸುವ ಹೊಣೆಗಾರಿಗೆ ಎಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕಾಗಿದೆ ಎಂದರು.
ಪ್ರಾಂಶುಪಾಲ ಪ್ರೊ.ಉದಯಕೃಷ್ಣ ಬಿ. ಅಧ್ಯಕ್ಷತೆ ವಹಿಸಿದ್ದರು. ಎನ್.ಎನ್.ಎಸ್ ಘಟಕದ ಸಂಯೋಜನಾಧಿಕಾರಿ ಕಲಾವತಿ ಎಂ, ರೆಡ್‌ಕ್ರಾಸ್ ಘಟಕದ ಅಧಿಕಾರಿ ಅರ್ಚನಾ ಆರ್.ರೈ ಮತ್ತು ಕಾನೂನು ನೆರವು ಸಮಿತಿಯ ಸಂಯೋಜಕಿ ನಯನಾ ಪಿ.ಯು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಎಚ್.ಎಸ್ ಹಾಗೂ ಗ್ರಂಥಾಧಿಕಾರಿ ವಸಂತ ಕುಮಾರ್ ಕಜೋಡಿ, ಕಚೇರಿ ಅಧೀಕ್ಷಕ ಗೋಪಿನಾಥ್ ಕೆ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.