ಪ್ಲಾಸ್ಟಿಕ್ ಸುಡುತ್ತಿರುವ ಗ್ರಾಪಂ – ಪೆರುವಾಯಿಯಲ್ಲಿ ಅಽಕಾರಿಗಳಿಂದಲೇ ನಿಯಮ ಉಲ್ಲಂಘನೆ – ಮೇಲಽಕಾರಿಗಳು ಡೋಂಟ್‌ಕೇರ್

blank


ಜನಸಾಮಾನ್ಯರು ಸರ್ಕಾರಿ ಆದೇಶಗಳನ್ನು ಪಾಲನೆ ಮಾಡದೆ ಹೋದರೆ ಕಠಿಣ ಕ್ರಮ ಕೈಗೊಳ್ಳುವ ಅಽಕಾರಿಗಳು, ತಮ್ಮ ಇಲಾಖೆಯ ತಳಮಟ್ಟದ ಅಽಕಾರಿಗಳು ಕಾನೂನು ಉಲ್ಲಂಘಿಸಿದರೆ ರಕ್ಷಣೆ ನೀಡುತ್ತಿದ್ದಾರೆ. ಇದರಿಂದ ಅಽಕಾರಿಗಳು ದಿನದಿಂದ ದಿನಕ್ಕೆ ಪರಿಸರವನ್ನು ಹಾಳುಗೆಡವುವ ಕೆಲಸವನ್ನು ಮಾಡುತ್ತಿದ್ದಾರೆ.


ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ವಿವಿಧ ರೀತಿಯ ಆದೇಶಗಳನ್ನು ಗ್ರಾಮಗಳಿಗೆ ಹೊರಡಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಹೇಳಿದೆ. ಆದರೆ ಪಂಚಾಯಿತಿಗಳ ಅಽಕಾರಿ ವರ್ಗ ಈ ಆದೇಶಕ್ಕೆ ತಲೆಕೆಡಿಸಿಕೊಂಡಂತ್ತಿಲ್ಲ. ಪ್ಲಾಸ್ಟಿಕ್ ಉರಿಸುವುದರಿಂದ ಪರಿಸರ ಮಾಲಿನ್ಯವಾಗುತ್ತದೆ ಎಂದು ಹೇಳುವ ಅಈಜಿಕಾರಿ ವರ್ಗವೇ ಸಂಗ್ರಹಿಸಿದ ಪ್ಲಾಸ್ಟಿಕನ್ನು ಉರಿಸುತ್ತಿದೆ.


ಪೆರುವಾಯಿ ಗ್ರಾಮ ಪಂಚಾಯಿತಿಗೆ ಸೇರಿದ ಕಡಂಬಿಲ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಘಟಕದ ಅಕ್ಕಪಕ್ಕದಲ್ಲಿ ಎಸೆಯಲಾಗಿದೆ. ಘಟಕದ ಪಕ್ಕದಲ್ಲೇ ಗುಂಡಿ ನಿರ್ಮಾಣ ಮಾಡಿ ಇದಕ್ಕೆ ಪ್ಲಾಸ್ಟಿಕ್ ಸುರಿದು ಬೆಂಕಿ ಇಡಲಾಗುತ್ತಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಉರಿಸಿದರೆ ದಂಡ ವಿಽಸುವ ಅಽಕಾರಿಗಳು ಪಂಚಾಯಿತಿ ಕಾರ್ಯವೈಖರಿಗೆ ಮೌನವಾಗಿದ್ದಾರೆ.


ಪ್ಲಾಸ್ಟಿಕ್ ಅನ್ನು ಮರು ಬಳಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಯನ್ನು ಹಾಕಿಕೊಂಡಿದೆಯಾದರೂ, ಅದನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸುವ ಕಾರ್ಯಕ್ಕೆ ಪಂಚಾಯಿತಿಗಳು ಮುಂದಾಗುತ್ತಿಲ್ಲ. ಇದರ ಜತೆಗೆ ಅನಾಗರಿಕರಂತೆ ವರ್ತಿಸುವ ಬುದ್ಧಿವಂತ ಜನರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಕೆಲಸವನ್ನು ಮುಂದುವರಿಸಿದ್ದಾರೆ.


ಸ್ಥಳೀಯರಿಂದ ದೂರು:
ಕಡಂಬಿಲ ವಸತಿ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ರಚನೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ೨೦೨೦ರಲ್ಲಿ ಜಿಲ್ಲಾಡಳಿತಕ್ಕೆ ದೂರು ನೀಡಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆಗಿನ ಉಸ್ತುವಾರಿ ಸಚಿವರಿಗೂ ದೂರು ನೀಡಿದ್ದ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಽಕಾರಿಗಳನ್ನು ಕರೆದು ಆ ಪ್ರದೇಶದಲ್ಲಿ ಮಾಡುವುದು ಬೇಡ ಎಂದು ಸೂಚನೆಯನ್ನು ನೀಡಿದ್ದರು. ಆದರೆ ಇದಕ್ಕೆ ಕ್ಯಾರ್ ಮಾಡದೆ ಘಟಕವನ್ನು ನಿರ್ಮಾಣ ಮಾಡಲಾಗಿತ್ತು.


ಜನರ ಜೀವದ ಜತೆಗೆ ಆಟ
ಇತ್ತೀಚೆಗೆ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿ ಕಂಬಳಬೆಟ್ಟು ತೋಡಿನಲ್ಲೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೂತು ಹಾಕುವ ಕಾರ್ಯ ಮಾಡಿತ್ತು. ಇಡ್ಕಿದು ಗ್ರಾಮ ಪಂಚಾಯಿತಿ ಚರಂಡಿಯಿಂದ ಎತ್ತಿದ ಪ್ಲಾಸ್ಟಿಕ್ ಅನ್ನು ಪಕ್ಕದಲ್ಲಿ ಮಣ್ಣಿನ ಜತೆಗೆ ರಾಶಿ ಹಾಕಿದೆ. ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪ್ಲಾಸ್ಟಿಕ್ ಅನ್ನು ಗುಂಡಿ ತೆಗೆದು ಹೂಳುವ ಕಾರ್ಯ ಮಾಡಿದೆ. ಇದೆಲ್ಲದರ ಬಗ್ಗೆ ಜಿಲ್ಲಾಮಟ್ಟದ ಅಽಕಾರಿಗಳಿಗೆ ತಿಳಿಸಿದರೂ ಯಾವ ಕ್ರಮವನ್ನು ಕೈಗೊಳ್ಳದೆ ಜನರ ಜೀವದ ಜತೆಗೆ ಆಡುತ್ತಿದ್ದಾರೆ.


ಗೋಮಾಳ ಜಾಗವೇ?
ಪೆರುವಾಯಿ ಪಂಚಾಯಿತಿ ನಿರ್ಮಾಣ ಮಾಡಿದ ಸ್ವಚ್ಛ ಸಂಕೀರ್ಣ ಕಟ್ಟಡ ಕೆಂಪು ಕಲ್ಲು ತೆಗೆದ ಕ್ವಾರಿಯಲ್ಲಿದೆ. ವಾಸ್ತವದಲ್ಲಿ ಈ ಜಾಗ ಗೋಮಾಳಕ್ಕೆ ಸೇರಿದೆ ಎಂಬ ಅನುಮಾನ ಸ್ಥಳೀಯ ನಿವಾಸಿಗಳದ್ದಾಗಿದೆ. ಈ ಬಗ್ಗೆ ಕಂದಾಯ ಇಲಾಖೆಯ ಅಽಕಾರಿಗಳಲ್ಲಿ ಕೇಳಿದರೆ, ಪಂಚಾಯಿತಿಯವರಲ್ಲಿ ಕೇಳಿ ಎಂಬ ಉತ್ತರ ನೀಡಲಾಗುತ್ತದೆ. ಗೋಮಾಳವನ್ನು ರಕ್ಷಣೆ ಮಾಡಬೇಕಾದ ಅಽಕಾರಿ ವರ್ಗ ಇದನ್ನು ತಿಂದು ತೇಗುವ ಕೆಲಸ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.


ಊಟ ಮಾಡಲಾಗದ ಸ್ಥಿತಿ:
ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಕಸವನ್ನು ಪಕ್ಕದ ಗುಂಡಿಯಲ್ಲಿ ಹಾಕಿ ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಬೆಂಕಿ ಹಾಕುವ ಕೆಲಸ ನಡೆಯುತ್ತಿದೆ. ಇದರಿಂದ ಉತ್ಪತ್ತಿಯಾಗುವ ಹೊಗೆಯಿಂದ ಅಕ್ಕಪಕ್ಕದಲ್ಲಿರುವ ಮನೆಯವರಿಗೆ ಕೂರಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ದಿನ ಹೊರಸೂಸುವ ದುರ್ನಾತಕ್ಕೆ ಊಟ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಸ್ವಚ್ಛ ಸಂಕೀರ್ಣದ ಪಕ್ಕದಲ್ಲಿ ಪ್ಲಾಸ್ಟಿಕ್ ಉರಿಸುವುದು ಕಣ್ಣಾರೆ ಕಂಡು, ಸಮಸ್ಯೆಯಾಗುತ್ತಿರುವ ಪಂಚಾಯಿತಿಗೆ ಈ ಬಗ್ಗೆ ಮೌಕಿಕವಾಗಿ ದೂರು ನೀಡಲಾಗಿದೆ. ಪಂಚಾಯಿತಿ ಅಽಕಾರಿ ವರ್ಗವೇ ನಿಯಮವನ್ನು ಮೀರಿ ಸಾರ್ವಜನಿಕರಿಗೆ ಸಮಸ್ಯೆ ಮಾಡುತ್ತಿರುವ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಽಕಾರಿಗಳಿಗೂ ಸಮಸ್ಯೆಯನ್ನು ವಾಟ್ಸಪ್ ಮೂಲಕ ಹೇಳಲಾಗಿದ್ದರೂ ಈ ವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.
| ಸದಾನಂದ
ಸ್ಥಳೀಯ ನಿವಾಸಿ

Share This Article

ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​..2025ಕ್ಕೆ ಬರ್ತಿದೆ ಹೊಸ ಶೂ.. ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ…! | The Zero, Shoes Trends |

ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಹಾಗು ಲಕ್ಷೂರಿ ಬ್ರ್ಯಾಂಡ್​ಗಳಲ್ಲಿ ಸಿಗುವಂತಹ ವಿಚಿತ್ರ ಬಟ್ಟೆ, ಶೂ ಹೀಗೆ ಸಾಕಷ್ಟು…

Monday Puja Tips: ಸೋಮವಾರದಂದು ಈ ಕಾರ್ಯಗಳನ್ನು ಮಾಡಿ ನೋಡಿ.. ಶಿವನ ಕೃಪೆಗೆ ಪಾತ್ರರಾಗುತ್ತೀರ…

Monday Puja Tips: ಸೋಮವಾರ ಹಿಂದೂ ಧರ್ಮದಲ್ಲಿ ಶಿವನಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು…

ನೀವು ಅಡುಗೆಗೆ ಪಾಮ್​ ಆಯಿಲ್​ ಬಳಸುತ್ತಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು! Palm Oil

Palm Oil : ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಕಡಲೆ ಎಣ್ಣೆ, ಸೂರ್ಯಕಾಂತಿ…