ಬೀಚ್‌ನಿಂದ 7 ಕ್ವಿಂಟಾಲ್ ಕಸ ಸಂಗ್ರಹ

cleaning
Published on

ಕಾಸರಗೋಡು: ವಿಶ್ವ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕೇರಳ ಕೇಂದ್ರೀಯ ವಿವಿ ವತಿಯಿಂದ ಕಾಞಂಗಾಡು ಪುಂಜಾವಿ ಬೀಚ್ ಸ್ವಚ್ಛಗೊಳಿಸಲಾಯಿತು.

ಸ್ವಚ್ಛತಾ ಹೀ ಸೇವಾ ಅಭಿಯಾನ ಅಂಗವಾಗಿ, ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಸ್ವಯಂಸೇವಕರು ಸೇರಿ ಏಳು ಕ್ವಿಂಟಾಲ್‌ಗೂ ಅಧಿಕ ಕಸ ಸಂಗ್ರಹಿಸಿದರು. ಕೇಂದ್ರೀಯ ವಿವಿಯ ಎನ್ನೆಸ್ಸೆಸ್ ವಿಭಾಗ, ಸಿಎಂಎಲ್‌ಆರ್‌ಇ, ಶಬರಿ ಕ್ಲಬ್, ನೀಲೇಶ್ವರ ಕರಾವಳಿ ಪೊಲೀಸ್ ಠಾಣೆ, ಸಾಗರ ಮಿತ್ರ ಸ್ವಯಂಸೇವಕರು ಮತ್ತು ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಬೀಚ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸಹಕರಿಸಿದರು.

ತ್ಯಾಜ್ಯ ವಿಂಗಡನೆ ಮಾಡಲಾಗಿದ್ದು ವೈಜ್ಞಾನಿಕ ವಿಲೇವಾರಿಗಾಗಿ ಮಹಾಯುಬಾ ಇಕೋ ಸೊಲ್ಯೂಷನ್ಸ್‌ಗೆ ಹಸ್ತಾಂತರಿಸಲಾಯಿತು.

ರಿಜಿಸ್ಟ್ರಾರ್ ಡಾ.ಎಂ.ಮುರಳೀಧರ ನಂಬಿಯಾರ್ ಅಭಿಯಾನ ಉದ್ಘಾಟಿಸಿದರು. ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಮುಖ್ಯ ಅತಿಥಿಯಾಗಿದ್ದರು. ಎಂಎಲ್‌ಆರ್‌ಇ ವಿಜ್ಞಾನಿ ಸಿ.ಆರ್.ಆಶಾದೇವಿ ಪ್ರತಿಜ್ಞೆ ಬೋಧಿಸಿದರು. ಕೇಂದ್ರೀಯ ವಿವಿ ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿ ಪ್ರೊ.ಮನು, ತಾಂತ್ರಿಕ ಅಧಿಕಾರಿ ಡಾ.ವಿ.ಸುಧೀಶ, ಸಿಎಂಎಲ್‌ಆರ್‌ಇ ವಿಜ್ಞಾನಿ ಡಾ.ಬಿ.ಆರ್.ಸ್ಮಿತಾ, ಮೀನುಗಾರಿಕೆ ವಿಸ್ತರಣಾಧಿಕಾರಿ ಅರುಣೇಂದು, ಪೊಲೀಸ್ ಅಧಿಕಾರಿ ಇ.ರತೀಶ್, ಶಬರಿ ಕ್ಲಬ್ ಕಾರ್ಯದರ್ಶಿ ಬಾಬು, ಎನ್‌ಎಸ್‌ಎಸ್ ಸ್ವಯಂ ಸೇವಕ ವಿಷ್ಣು ಪ್ರಸಾದ್ ಉಪಸ್ಥಿತರಿದ್ದರು. ರಮೇಶ ನಡುವಿಲ್ ಕಡಲತೀರದಲ್ಲಿ ಮರಳುಶಿಲ್ಪ ರಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net