ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

gramasabhe
ಕೆಂಜೂರು ಶ್ರೀವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಗ್ರಾಮಸಭೆ ಜರುಗಿತು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲೇ ಜಾಗ್ರತೆ ವಹಿಸಬೇಕು. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮುಂತಾದವುಗಳ ಬಗ್ಗೆ ಅರಿವಿರಬೇಕು ಎಂದು ಕರ್ಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸವಿತಾ ಕುಂದರ್ ಹೇಳಿದರು.

38ನೇ ಕಳ್ತೂರು ಗ್ರಾ.ಪಂ.ನಲ್ಲಿ ಮಹಿಳಾ ಸ್ನೇಹಿ ಗ್ರಾ.ಪಂ. ಅಭಿಯಾನದ ಭಾಗವಾಗಿ ಮಹಿಳಾ ಗ್ರಾಮಸಭೆ ಕೆಂಜೂರು ಶ್ರೀವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.

38ನೇ ಕಳ್ತೂರು ಗ್ರಾ.ಪಂ. ಅಧ್ಯಕ್ಷ ನವೀನ್ ಕುಮಾರ್ ಬಿ. ಉದ್ಘಾಟಿಸಿದರು. ಮಣಿಪಾಲ ಕೆಎಂಸಿಯಿಂದ ಮಹಿಳೆಯರ ಆರೋಗ್ಯ ತಪಾಸಣೆ ನಡೆಯಿತು. 60ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿ ಇದರ ಪ್ರಯೋಜನ ಪಡೆದರು. ಸಂಜೀವಿನಿ ಸಂಕಲ್ಪ ಒಕ್ಕೂಟದಿಂದ ಸಂಜೀವಿನಿ ಸಂತೆ ಏರ್ಪಡಿಸಲಾಯಿತು.

ಉಪಾಧ್ಯಕ್ಷ ರಮಾನಂದ ಶೆಟ್ಟಿ, ಸದಸ್ಯರಾದ ಚಂದ್ರಶೇಖರ ಶೆಟ್ಟಿ, ದಿನೇಶ್ ಶೆಟ್ಟಿ, ಸುಕನ್ಯಾ ಶೆಟ್ಟಿ, ಉಷಾ ಪೂಜಾರಿ, ಮಂಜುಳಾ, ಲಲಿತಾ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಗ್ರಾ.ಪಂ. ನೋಡಲ್ ಅಧಿಕಾರಿ ಮಂಜುನಾಥ ಅಡಿಗ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಗೌರಿ, ವಿರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನವೀನ್ ಚಂದ್ರ ಶೆಟ್ಟಿ, ಮಹಿಳಾ ಮೇಲ್ವಿಚಾರಕಿ ವನಿತಾ, ಜಿಲ್ಲಾ ಮಹಿಳಾ ಸಬಲೀಕರಣ ಸಂಯೋಜಕಿ ಶಾರದಾ, ಕೆಎಂಸಿ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪಿಡಿಒ ಸವಿತಾ ಎ.ಸಿ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net