

ಕೋಟ: ವಡ್ಡರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲವನ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು. ಬಾಲವನವನ್ನು ಶಾಲೆಗೆ ಕೊಡುಗೆಯಾಗಿ ನೀಡಿದ ಮುಂಬೈನ ಒಎನ್‌ಜಿಸಿ ಕಂಪನಿ ನಿವೃತ್ತ ಚೀಫ್ ಜನರಲ್ ಮ್ಯಾನೇಜರ್ ನಾರಾಯಣ ಆಚಾರ್ ಬನ್ನಾಡಿ ಉದ್ಘಾಟಿಸಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಆಚಾರ್, ದಾನಿಗಳಾದ ಸೀತಾರಾಮ್ ಆಚಾರ್ ಬನ್ನಾಡಿ, ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಚಂದ್ರಶೇಖರ್ ಶೆಟ್ಟಿ ಯಾಳಹಕ್ಲು, ಶುಭೋದಯ ಶೆಟ್ಟಿ ವಡ್ಡರ್ಸೆ, ಹೇಮಲತಾ ಶೆಟ್ಟಿ ವಡ್ಡರ್ಸೆ, ಉದಯ್ ಕುಮಾರ್ ಶೆಟ್ಟಿ ಕೊತ್ತಾಡಿ, ವಿಜಯ್ ಕುಮಾರ್ ಶೆಟ್ಟಿ ಕೊತ್ತಾಡಿ, ಪುಷ್ಪಲತಾ ನಾಯಿರಿ, ಇನ್ನರ್ ವೀಲ್ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷೆ ಅಮಿತಾ ಶೆಟ್ಟಿ ವಡ್ಡರ್ಸೆ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಗ್ರಾಮದ ಪ್ರಮುಖರಾದ ಚಂದ್ರ ಶೆಟ್ಟಿ ಯಾಳಹಕ್ಲು ಹೇಮಲತಾ ಉಪಸ್ಥಿತರಿದ್ದರು. ದಾನಿಗಳಾದ ನಾರಾಯಣ ಆಚಾರ್ ಬನ್ನಾಡಿ ಅವರನ್ನು ಗೌರವಿಸಲಾಯಿತು.
ಮುಖ್ಯಶಿಕ್ಷಕಿ ಗಿರಿಜಾ ಸ್ವಾಗತಿಸಿದರು. ಅಧ್ಯಾಪಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಸಹ ಶಿಕ್ಷಕಿ ಯಶೋದಾ ವಂದಿಸಿದರು.